Friday, April 4, 2025

ಹೆಂಡತಿ ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ಮುಂದೆ, ಪ್ರತ್ಯಕ್ಷವಾದ ಹೆಂಡತಿ..!

ಮೈಸೂರು : ತಪ್ಪೇ ಮಾಡದಿದ್ದರು ಅಮಾಯಕ ಪತಿಯೊಬ್ಬ ತನ್ನ ಪತ್ನಿಯ ಕೊಲೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದ್ದು. ಅಮಾಯಕ ಪತಿಯನ್ನು ಸುರೇಶ್​ ಎಂದು ಗುರುತಿಸಲಾಗಿದೆ. ಆದರೆ ಇದೀಗ ಕೊಲೆಯಾಗಿದ್ದಾಳೆ ಎನ್ನಲಾಗಿದ್ದ ಪತ್ನಿ ಸುರೇಶ್​ ಸ್ನೇಹಿತರಿಗೆ ಪತ್ತೆಯಾಗಿದ್ದಾರೆ.

ಕೊಡಗು ಜಿಲ್ಲೆಯ, ಕುಶಾಲನಗರ ತಾಲ್ಲೂಕಿನ, ಬಸವನ ಹಳ್ಳಿ ಗ್ರಾಮದ ಸುರೇಶ್​ 2021ರಲ್ಲಿ ತನ್ನ ಪತ್ನಿ ಮಲ್ಲಿಗೆ ಕಾಣೆಯಾಗಿದ್ದಾಳೆ ಎಂದು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದನು. ದೂರು ಕೊಟ್ಟ ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರಿಗೆ  ಒಂದು ವರ್ಷದ ಬಳಿಕ ಮೈಸೂರು ಜಿಲ್ಲೆಯ ಬೆಟ್ಟದಪುರ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ಅಪರಿಚಿತ ಮಹಿಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು.

ಅಪರಿಚಿತ ಅಸ್ತಿ ಪಂಜರ ಪತ್ತೆಯಾದ ಬಳಿಕ ನಿನ್ನ ಹೆಂಡತಿಯನ್ನು ನೀನೇ ಕೊಂದಿದ್ದೀಯ ಎಂದು ಒತ್ತಡ ಹೇರಿದ್ದ ಪೊಲೀಸರು ಅಮಾಯಕ ಪತಿ ಸುರೇಶ್​ನನ್ನು ಬಂಧಿಸಿದ್ದರು. ಸುರೇಶ್​ನ ಅತ್ತೆ-ಮಾವ ಕೂಡ ಸುರೇಶ್​ ಮೇಲೆ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಪೊಲೀಸರು ಸುರೇಶ್​ನನ್ನು ಜೈಲಿಗೆ ಅಟ್ಟಿದ್ದರು.

ಇದನ್ನೂ ಓದಿ :ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ: ಬಿಹಾರ್​ ಮೂಲದ ಯುವತಿ ಮೇಲೆ ಅತ್ಯಾಚಾರ..!

ಸುರೇಶ್​ನನ್ನು ಜೈಲಿಗೆ ಕಳುಹಿಸಿದ ನಂತರ ಕೋರ್ಟ್​ ಅನುಮತಿ ಪಡೆದ ಪೊಲೀಸರು ಅಸ್ಥಿಪಂಜರವನ್ನು ಡಿಎನ್​ಎ ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ಡಿಎನ್​ಎ ಪರೀಕ್ಷೆಯ ವರದಿ ಸರಿಯಾಗ ಬರದ ಕಾರಣ ನ್ಯಾಯಾಲಯ ಸುರೇಶ್​ಗೆ ಜಾಮೀನು ನೀಡಿ ಜೈಲಿಂದ ಬಿಡುಗಡೆ ಮಾಡಿತ್ತು.

ಆದರೆ ಈ ಎಲ್ಲಾ ಗೊಂದಲದ ನಡುವೆ ಸುರೇಶ್​ ಪತ್ನಿ ಮಲ್ಲಿಗೆ ಮಡಿಕೇರಿ ಹೋಟೆಲ್​ನಲ್ಲಿ ಕಾಣಿಸಿಕೊಂಡಿದ್ದು. ಸುರೇಶ್​ನ ಸ್ನೇಹಿತರು ಮಲ್ಲಿಗೆಯನ್ನು ನೋಡಿದ್ದಾರೆ. ಇದೀಗ ಬೆಟ್ಟದಪುರ ಪೊಲೀಸರು ಮಹಿಳೆಯನ್ನು ಮೈಸೂರು ಕೋರ್ಟ್​ಗೆ ಹಾಜರು ಪಡಿಸಿದ್ದು. ಹಿಂದೆ ತನಿಖೆ ನಡೆಸಿದ್ದ ಪೊಲೀಸರ ಮೇಲೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES