ವಿವಾದಿತ ವಕ್ಫ್ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು. ಮಸೂದೆ ಕುರಿತು ದೇಶದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಬಹುತೇಕ ಮುಸ್ಲಿಮ್ ಸಂಘಟನೆಗಳು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದು. ಅಖಿಲ ಭಾರತ ಮುಸ್ಲಿಂ ಜಮಾತ್ ಸಂಘಟನೆ ಈ ಮಸೂದೆಯನ್ನು ಸ್ವಾಗತಿಸಿದೆ. ಜೊತೆಗೆ ಈ ಮಸೂದೆ ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಂಮರ ಉನ್ನತಿಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕರಿಸಿರುವುದನ್ನು ಸ್ವಾಗತಿಸಿರುವ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಶಹಬುದ್ದೀನ್ ರಜ್ಜಿ ಬರೆಲ್ವಿ. “ಈ ಮಸೂದೆಯಿಂದ ಹಿಂದೂಳಿದ ಮುಸ್ಲಿಂರಿಗೆ ಒಳಿತಾಗಲಿದೆ. ಈ ಮಸೂದೆ ಪರವಾಗಿ ಮತ ಹಾಕಿರುವ ಎಲ್ಲಾ ಸಂಸದರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಇಂತಹ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರಕ್ಕೂ ನನ್ನ ನಮನಗಳು” ಎಂದು ತಮ್ಮ ಹೇಳಿಕೆಯಲ್ಲಿ ರಿಜ್ವಿ ತಿಳಿಸಿದ್ದಾರೆ.
ಇದನ್ನೂ ಓದಿ :ಅಭಿಮಾನಿಗಳಿಗೆ ಕಿಚ್ಚನಿಂದ ಬಿಗ್ ಸಪ್ರೈಸ್: ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಅಪ್ಡೇಟ್..!
ಮುಂದುವರಿದು ಮಾತನಾಡಿರುವ ಶಹಾಬುದ್ದಿನ್ ರಿಜ್ವಿ ‘ಬಡವರು, ದುರ್ಬಲರು ಮತ್ತು ಅನಾಥರನ್ನು ಪೋಷಿಸುವುದು ವಕ್ಫ್ನ ಮೂಲ ಉದ್ದೇಶವಾಗಿತ್ತು. ಆದರೆ, ಅದರ ಉದ್ದೇಶವನ್ನು ಮರೆತು ಕೆಲವರಷ್ಟೇ ಅದರಿಂದ ಬರುವ ಆದಾಯವನ್ನು ಜೇಬಿಗಿಳಿಸಿಕೊಳ್ಳುತ್ತಿದ್ದರು. ಇದೀಗ ಮಸೂದೆಯು ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮರ ಉನ್ನತಿಗೆ ಸಹಕಾರಿಯಾಗಲಿದೆ’ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿಯೂ ಮಸೂದೆ ಅಂಗೀಕಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ‘ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಮತ್ತು ವಕ್ಸ್ ಸಂಪನ್ಮೂಲ ಉದ್ದೇಶಿತ ಕೆಲಸಗಳಿಗೆ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಲಿದೆ’ ಎಂದು ತಿಳಿಸಿದರು.