Wednesday, May 7, 2025

ಥೈಲ್ಯಾಂಡ್​ನಲ್ಲಿ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ..!

ಬ್ಯಾಂಕಾಕ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಥೈಲ್ಯಾಂಡ್, ಶ್ರೀಲಂಕಾ ಪ್ರವಾಸದಲ್ಲಿದ್ದು. ಪ್ರಧಾನಿ ಮೋದಿ ಬ್ಯಾಕಾಂಕ್​ಗೆ ಬಂದಿಳಿಯುತ್ತಿದ್ದಂತೆ ಬ್ಯಾಕಾಂಕ್​ ಜನತೆ ಮೋದಿ, ಮೋದಿ ಎನ್ನುತ್ತಾ ಸ್ವಾಗತ ಕೋರಿದರು. ಈ ವೇಳೆ ಪ್ರಧಾನಿ ಮೋದಿ ಥಾಯ್​ ರಾಮಾಯಣವನ್ನು ವೀಕ್ಷಿಸಿದರು.

ಬ್ಯಾಕಾಂಕ್​ಗೆ ಬಂದಿಳಿಯುತ್ತಿದ್ದಂತೆ ಅದ್ದೂರಿಯಾಗಿ ಸ್ವಾಗತ ಪಡೆದ ಮೋದಿ, ಅಲ್ಲಿ ಅವರು ಥಾಯ್​ ರಾಮಾಯಣ ಹಾಗೂ ಗರ್ಭಾ ನೃತ್ಯವನ್ನು ವೀಕ್ಷಿಸಿದ್ದಾರೆ. ಭಾರತ ಮತ್ತು ಥೈಲ್ಯಾಂಡ್ ನಡುವಿನ ಆಳವಾದ ಸಾಂಸ್ಕೃತಿಕ ಸಂಬಂಧಗಳನ್ನು ಸಂಕೇತಿಸುವ ರಾಮಾಯಣದ ಥಾಯ್ ಆವೃತ್ತಿ ‘ರಾಮಕಿಯೆನ್’ ಅನ್ನು ವೀಕ್ಷಿಸಿದರು.

ಇದನ್ನೂ ಓದಿ :ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ : ವಿಜಯೇಂದ್ರ

ಥೈಲಾಂಡ್​ ಪ್ರವಾಸ ವೇಳೆ ಪ್ರಧಾನಿ ಮೋದಿ ಬ್ಯಾಂಕಾಕ್‌ನಲ್ಲಿ ಪ್ರಧಾನಿ ಪಟೊಂಗ್‌ಟಾರ್ನ್ ಶಿನವಾತ್ರ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಅಲ್ಲಿ ವ್ಯಾಪಾರ ವಿಷಯಗಳ ಕುರಿತು ಪ್ರಮುಖ ಚರ್ಚೆಗಳು ನಡೆಯಬಹುದು. ಏಪ್ರಿಲ್ 4, 2025 ರಂದು ನಡೆಯಲಿರುವ 6 ನೇ BIMSTEC ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಇಲ್ಲಿ ಅವರು ಪ್ರಾದೇಶಿಕ ನಾಯಕರೊಂದಿಗೆ ಸಹಕಾರದ ಪ್ರಮುಖ ಕ್ಷೇತ್ರಗಳ ಕುರಿತು ಪ್ರಧಾನಿ ಮೋದಿ ಚರ್ಚಿಸಲಿದ್ದಾರೆ.

ಇದರೊಂದಿಗೆ ಪ್ರಧಾನಿ ಮೋದಿ ಶ್ರೀಲಂಕಾಕ್ಕೂ ಭೇಟಿ ನೀಡಲಿದ್ದಾರೆ. ಶ್ರೀಲಂಕಾ ಮತ್ತು ಥೈಲ್ಯಾಂಡ್ ಬಿಮ್‌ಸ್ಟೆಕ್‌ನ ಭಾಗವಾಗಿರುವುದರಿಂದ ಬಿಮ್‌ಸ್ಟೆಕ್ ದೃಷ್ಟಿಕೋನದಿಂದ ಪ್ರಧಾನಿ ಮೋದಿಯವರ ಎರಡೂ ದೇಶಗಳ ಭೇಟಿ ಬಹಳ ಮುಖ್ಯವಾಗಿದೆ.

RELATED ARTICLES

Related Articles

TRENDING ARTICLES