ದೆಹಲಿ : ವಿವಾದಿತ ವಕ್ಫ್ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದ್ದು. ಈ ಬಿಲ್ಗೆ ಈಗಾಗಲೇ ಲೋಕಸಭೆ ಅಂಗೀಕಾರ ನೀಡಿದೆ. ಈ ವೇಳೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿದ್ದು. ಅಲ್ಪಸಂಖ್ಯಾತಯರಿಗೆ ಭಾರತ ಅತ್ಯಂತ ಸುರಕ್ಷಿತ ಸ್ಥಳ ಮತ್ತೊಂದಿಲ್ಲ ಎಂದು ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಕಿರಣ್ ರಿಜಿಜು ‘ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ ಭಾರತಕ್ಕಿಂತ ಸುರಕ್ಷಿತವಾದ ಸ್ಥಳ ಅಲ್ಪಸಂಖ್ಯಾತರಿಗೆ ಮತ್ತೊಂದಿಲ್ಲ. ನಾನು ಕೂಡ ಒಬ್ಬ ಅಲ್ಪಸಂಖ್ಯಾತನಾಗಿ ಇಲ್ಲಿ ಯಾವುದೇ ಭಯವಿಲ್ಲದೆ, ಗೌರವದಿಂದ ಬದುಕುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ :ಹೆಂಡತಿ ಕೊ*ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ಮುಂದೆ, ಪ್ರತ್ಯಕ್ಷವಾದ ಹೆಂಡತಿ..!
ಪಾಕಿಸ್ತಾನ, ಬಾಂಗ್ಲದೇಶ, ಶ್ರೀಲಂಕಾ ಸೇರಿದಂತೆ ಕೆಲವು ದೇಶಗಳಲ್ಲಿನ ಅಲ್ಪಸಂಖ್ಯಾತರು ಅಲ್ಲಿನ ಧಾರ್ಮಿಕ ಹಿಂಸೆಗೆ ಬೇಸತ್ತು ಭಾರತಕ್ಕೆ ಬಂದಿದ್ದಾರೆ. ಭಾರತ ಅಂತವರಿಗೆ ಅವಕಾಶ ಕಲ್ಪಿಸಿದೆ. ಟಿಬೆಟ್ ಧರ್ಮಗುರು ದಲೈಲಾಮ ಕೂಡ ಭಾರತಕ್ಕೆ ಬಂದಿದ್ದಾರೆ. ಇಂತಹ ಉದಾಹರಣೆಗಳಿರುವಾಗ ನೀವು ಹೇಗೆ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಲ್ಲ ಎಂದು ಹೇಳುತ್ತೀರಿ, ನಿಮ್ಮನ್ನು ಮುಂದಿನ ಪೀಳಿಗೆ ಕ್ಷಮಿಸಲ್ಲ ಎಂದು ಹೇಳಿದರು.