ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು. ಅಣ್ಣನ ಜೊತೆ ಊಟ ಮಾಡಲು ಎಂದು ಹೊರಟ್ಟಿದ್ದ ಯುವತಿ ಮೇಲೆ ಇಬ್ಬರು ಅಪರಿಚಿತರು ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು. ಮಹದೇವಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಿಹಾರ ಮೂಲದ ಯುವತಿಯ ಮೇಲೆ ಪೈಶಾಚಿಕ ಕೃತ್ಯ ನಡೆದಿದ್ದು. ಯುವತಿ ತನ್ನ ಅಕ್ಕ-ಭಾವನ ಜೊತೆ ಕೆಲಸಕ್ಕೆಂದು ಕೇರಳದ ಎರ್ನಾಕುಲಂನಲ್ಲಿ ವಾಸವಾಗಿದ್ದಳು. ಆದರೆ ಕೆಲಸ ಬಿಟ್ಟು ಊರಿಗೆ ಹೋಗಲು ಯುವತಿ ಎರ್ನಾಕುಲಂನಿಂದ ಬೆಂಗಳೂರಿಗೆ ಬಂದಿದ್ದಳು. ಬೆಂಗಳೂರಿಗೆ ಬರುವ ಮುನ್ನ ಬೆಂಗಳೂರಿನಲ್ಲಿ ವಾಸವಾಗಿದ್ದ ದೊಡ್ಡಮ್ಮನ ಮಗನಿಗೆ ಕರೆ ಮಾಡಿ ಬೆಂಗಳೂರಿಗೆ ಬರುವುದಾಗಿ ತಿಳಿಸಿದ್ದಳು. ಏಪ್ರೀಲ್ 2ರ ಮಧ್ಯರಾತ್ರಿ 1:13ರಲ್ಲಿ ಕೆ.ಆರ್ ಪುರಂ ರೈಲು ನಿಲ್ದಾಣಕ್ಕೆ ಯುವತಿ ಬಂದಿದ್ದಳು.
ಇದನ್ನೂ ಓದಿ : ಕೌಟುಂಬಿಕ ಕಲಹ ನಾಲ್ವರು ಬಲಿ; ಸ್ವಂತ ತಂದೆ ಕೈಯಿಂದಲೇ ಕಣ್ಮುಚ್ಚಿದ ಹಸುಗೂಸು..!
ರೈಲು ಇಳಿದ ನಂತರ ಯುವತಿ ತನ್ನ ಅಣ್ಣನೊಂದಿಗೆ ಊಟ ಮಾಡಲು ಮಹದೇವಪುರದ ಕಡೆಗೆ ಹೊರಟ್ಟಿದ್ದಳು. ಈ ವೇಳೆ ದಿಡೀರನೆ ಎಂಟ್ರಿಯಾದ ಇಬ್ಬರು ಅಪರಿಚಿತರು, ಯುವತಿ ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ. ಯುವತಿ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಆರೋಪಿಗಳಿಬ್ಬರನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.