Thursday, April 3, 2025

ಹಿರಿಯ ನಟ ಸುದರ್ಶನ್​ ಪತ್ನಿ ಶೈಲಶ್ರೀ ಸುದರ್ಶನ್ ಬದುಕಲ್ಲಿ ಬೆಳಕಾದ ನಟ ದರ್ಶನ್​..!

ಬೆಂಗಳೂರು : ಹಿರಿಯ ಸ್ಯಾಂಡಲ್​ವುಡ್​ ನಟ ಸುದರ್ಶನ್​ ಅವರ ಪತ್ನಿ  ಶೈಲಶ್ರೀ ಸುದರ್ಶನ್​ ಅವರ ವೃದ್ದಾಪ್ಯದಲ್ಲಿ ನಟ ದರ್ಶನ್​ ನೆರವು ನೀಡಿದ್ದು. ಹಿರಿಯ ನಟನ ಪತ್ನಿಯ ಕೊನೆಗಾಲದ ಜೀವನಕ್ಕೆ ನಟ ದರ್ಶನ್​ ಬೆಳಕಾಗಿದ್ದಾರೆ.

ನಟ ಸುದರ್ಶನ್ ಪತ್ನಿ ಶೈಲಶ್ರೀ ಅವರೂ ಕಲಾವಿದರೇ. ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಕ್ಕಳಿಗೆ ಸಂಗೀತ ಹೇಳಿಕೊಡ್ತಾ ಇದ್ದರು. ಚೆನ್ನೈಯಿಂದ ಬಂದ್ಮೇಲೆ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಸುದರ್ಶನ್ ಅವರು ಕೆಲವು ಕನ್ನಡ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದರು. ಜಗ್ಗೇಶ್ ಅವರ ಸಿನಿಮಾಗಳಲ್ಲೂ ನಟಿಸಿದ್ದರು.

ಆದರೆ ಸುದರ್ಶನ ಅವರ ನಿಧನದ ನಂತರ ಒಂಟಿಯಾಗಿದ್ದ ಶೈಲಶ್ರಿ ಅವರು ಒಬ್ಬಂಟಿಯಾಗಿ ಅಪಾರ್ಟ್​ಮೆಂಟ್​ ಒಂದರಲ್ಲಿ ವಾಸವಾಗಿದ್ದರು. ಇವರಿಗೆ ಗಿರೀಜಾ ಲೋಕೇಶ್​ ಅವರು ಕೂಡ ಸಹಾಯ ಹಸ್ತ ಚಾಚಿದ್ದರು.ವಯಸ್ಸಾದ ಕಾರಣ ಒಬ್ಬಂಟಿಯಾಗಿ ಬದುಕಲಾಗೆ ಶೈಲಶ್ರೀ ಅವರು ವೃದ್ದಾಶ್ರಮಕ್ಕೆ ಸೇರಿಕೊಂಡಿದ್ದರು.

ಇದನ್ನೂ ಓದಿ :ಚಲಿಸುತ್ತಿದ್ದ ರೈಲಿಗೆ ನಾಯಿ ಹತ್ತಿಸಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದ ಮಾಲೀಕ

ಆದರೆ ನಟ ದರ್ಶನ್​ ಜೈಲಿನಿಂದ ಹೊರ ಬಂದ ನಂತರ ದರ್ಶನ್​ ಯೂಟ್ಯೂಬ್​ ಒಂದರಲ್ಲಿ ಶೈಲಶ್ರೀ ಅವರಿಗೆ ಸಹಾಯ ಬೇಕಿದೆ ಎಂಬುದನ್ನು ಗಮನಿಸಿದ್ದರು. ಇದಾದ ಬಳಿಕ ಸಹೋದರ ದಿನಕರ್​ ಮೂಲಕ ದರ್ಶನ್​ ಶೈಲಶ್ರೀ ಅವರಿಗೆ ಸಹಾಯ ಮಾಡಿದ್ದಾರೆ. ಆಶ್ರಮಗಳಲ್ಲಿ ಅವರ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಶೈಲಶ್ರೀ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದರು, ಆದರೆ ಇತ್ತೀಚಗೆ ಕ್ಯಾನ್ಸರ್​ನಿಂದ ಚೇತರಿಸಿಕೊಂಡಿದ್ದು. ಕೊನೆಗಾಲದ ತನಕ ದರ್ಶನ್​ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೀಗ ಶೈಲಶ್ರೀ ಅವರು ಸುಂದರವಾದ ಆಶ್ರಮದಲ್ಲಿ ವಾಸಿಸುತ್ತಿದ್ದು. ಹಿರಿಯ ನಟಿ ಗಿರೀಜಾ ಲೋಕೇಶ್​ ಅವರು ಕೂಡ ಇವರ ಬೆನ್ನಿಗೆ ನಿಂತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES