ಬೀದರ್ : ವಕ್ಫ್ ತಿದ್ದುಪಡಿ ಮಸೂದೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕ ಈಶ್ವರ್ ಖಂಡ್ರೆ ಬಿಜೆಪಿಗರ ಮೇಲೆ ವಾಗ್ದಾಳಿ ನಡೆಸಿದ್ದು. ಕಾಂಗ್ರೆಸ್ ಇರೋದಕ್ಕೆ ಇನ್ನು ಈ ದೇಶ ಉಳಿದಿದೆ. ಬಿಜೆಪಿಗರು ಈ ಕಾಂಗ್ರೆಸ್ಗೆ ಕೃತಜ್ಞರಾಗಿರಬೇಕು ಎಂದು ಹೇಳಿದರು.
ಬೀದರ್ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ‘ದೇಶದಲ್ಲಿ ಹಣದುಬ್ಬರ, ಬೆಲೆಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿವೆ. ಆದರೆ ಬಿಜೆಪಿ ಸರ್ಕಾರ ಅದನ್ನೆಲ್ಲಾ ಬಿಟ್ಟು ಒಂದು ಸಮುದಾಯವನ್ನ ಉದ್ದೇಶವಾಗಿಟ್ಟುಕೊಂಡು ಈ ರೀತಿ ಮಾಡ್ತಾ ಇದ್ದಾರೆ. ಜಾತಿ ಜಾತಿ, ಧರ್ಮ ಧರ್ಮದ ನಡುವೆ ಕಲಹ ಸೃಷ್ಟಿಸುವ ಕೆಲಸ ಮಾಡ್ತಾ ಇದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಈದ್ಗಾ ಮೈದಾನಕ್ಕೆ ಬೇಲಿ, ರಂಜಾನ್ ಮುಗಿಯುತ್ತಿದ್ದಂತೆ ಶಿವಮೊಗ್ಗ ಉದ್ವಿಗ್ನ..!
ಮುಂದುವರಿದು ಮಾತನಾಡಿದ ಖಂಡ್ರೆ ‘ ಕಾಂಗ್ರೆಸ್ ಇರೋದಕ್ಕೆ ದೇಶ ಉಳಿದಿದೆ, ನಾವು ಮಾಡಿದ್ದ ಯೋಜನೆಗಳ ಮೇಲೆ ಬಿಜೆಪಿಯವರು ಎತ್ತಿ ನಡೀತಾ ಇದಾರೆ. ರಸ್ತೆ, ಅಣೆಕಟ್ಟು, ಸ್ಯಾಟಲೈಟ್, ತಂತ್ರಜ್ಞಾನ ಎಲ್ಲವೂ ನಾವು ಮಾಡಿದ್ದೆವು. ಬಿಜೆಪಿಯವರು ಕಾಂಗ್ರೆಸ್‌ನವರಿಗೆ ಕೃತಜ್ಙರಾಗಿರಬೇಕು. ಕಾಂಗ್ರೆಸ್ ಸಾಧನೆ ಮೇಲೆ ನಾವು ಮೆರೆಯುತ್ತಾ ಇದ್ದೀವಿ ಅನ್ನೋದು ಬಿಜೆಪಿ ಮರಿಬಾರದು. ಕಾಂಗ್ರೆಸ್ ಪಕ್ಷಕ್ಕೆ ತೆಗಳಿದರೆ, ಅವರ ಅಜ್ಜ-ಅಜ್ಜಿಗೆ ತೆಗಳಿದಕ್ಕೆ ಸಮ ಎಂದು ಈಶ್ವರ್ ಖಂಡ್ರೆ ಬಿಜೆಪಿ ವಿರುದ್ದ ಕಿಡಿಕಾರಿದರು.