ಬೆಂಗಳೂರು : ಪೋಷಕರ ನಿರ್ಲಕ್ಷಕ್ಕೆ ಬಾಲಕಿಯೊಬ್ಬಳು ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಯನ್ನು 14 ವರ್ಷದ ನಿಧಿ ಕೃಷ್ಣ ಎಂದು ಗುರುತಿಸಲಾಗಿದೆ.
ಬಾಲಕಿ ನಿಧಿ ಕೃಷ್ಣ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಳು. ಬಾಲಕಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಆಲೋವೆರಾ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ಬಾಲಕಿಯ ಪೋಷಕರು ಅದೇ ಆಲೋವೆರಾ ಡಬ್ಬದಲ್ಲಿ ಹರ್ಬಿಸೈಡ್ ಎಂಬ ಔಷದಿಯನ್ನು ತುಂಬಿಟ್ಟಿದ್ದರು. ಈ ವಿಷವನ್ನು ಗಿಡಗಳಿಗೆ ಬಳಸಲಾಗುತ್ತಿತ್ತು.
ಇದನ್ನೂ ಓದಿ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಮ್ಯಾಚ್; ಮೆಟ್ರೋ ಸೇವೆ ಮಧ್ಯರಾತ್ರಿವರೆಗೆ ವಿಸ್ತರಣೆ
ಆದರೆ ಮಾರ್ಚ್ 14ರಂದು ಬಾಲಕಿ ಜ್ಯೂಸ್ ಎಂದು ಡಬ್ಬದಲ್ಲಿ ತುಂಬಿಟ್ಟಿದ್ದ ವಿಷ ಸೇವಿಸಿದ್ದಳು. ವಿಷ ಸೇವಿಸಿ ಅನಾರೋಗ್ಯಕ್ಕೆ ಈಡಾಗಿದ್ದ ಬಾಲಕಿಯನ್ನು ಪೊಷಕರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮಾರ್ಚ್ 31ರಂದು ಸಾವನ್ನಪ್ಪಿದ್ದಾಳೆ. ಮೈಸೂರು ರಸ್ತೆಯ ಬ್ಯಾಟರಾಯನ ಪುರ ಪೋಲಿಸ್ ಠಾಣಾ ವ್ಯಾಪ್ತಿಯನ್ನು ಘಟನೆ ನಡೆದಿದೆ.