ಮುಂಬೈ : ರೈಲ್ವೆ ನಿಲ್ದಾಣದಲ್ಲಿ ಹೊರಟಿದ್ದ ರೈಲಿಗೆ ನಾಯಿಯನ್ನು ಹತ್ತಿಸಲು ಹೋಗಿ ನಾಯಿ ಆಯತಪ್ಪಿ ಪ್ಲಾಟ್ಫಾರಂ ಹಾಗೂ ರೈಲಿನಡಿ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆದರೆ ಘಟನೆಯಲ್ಲಿ ನಾಯಿ ಪವಾಡ ಸದೃಷ್ಯದಂತೆ ಬದುಕುಳಿದಿದೆ ಎಂದು ತಿಳಿದು ಬಂದಿದೆ.
ಸಾಕು ಪ್ರಾಣಿಗಳನ್ನು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಹಾಗೆ ನೋಡಿಕೊಳ್ಳುವುದನ್ನು ನಾವು ಕಂಡಿರುತ್ತೇವೆ. ಅವುಗಳ ಸುರಕ್ಷತೆ ಮತ್ತು ಅವುಗಳ ಯೋಹಕ್ಷೇಮಕ್ಕೆ ಮಾಲೀಕರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಓಡಾಡುವ ಸಂದರ್ಭದಲ್ಲಿ ಮತ್ತಷ್ಟು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಿಯನ್ನು ಚಲಿಸುತ್ತಿದ್ದ ರೈಲಿಗೆ ಹತ್ತಿಸಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದಿದ್ದಾನೆ.
ಇದನ್ನೂ ಓದಿ : ನಂಜನಗೂಡಿನ ನಂಜುಂಡೇಶ್ವನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ ತಾಯಿ ಮೀನಾ ತೂಗುದೀಪ್
ಈ ವೈರಲ್ ವಿಡಿಯೋದಲ್ಲಿ ಮಾಲೀಕನೊಬ್ಬ ತನ್ನ ನಾಯಿಯನ್ನು ಚಲಿಸುತ್ತಿದ್ದ ರೈಲಿಗೆ ಹತ್ತಿಸಲು ಹೋಗಿದ್ದಾನೆ. ಆದರೆ ಭಯಗೊಂಡ ನಾಯಿ ರೈಲು ಹತ್ತಲು ಕಷ್ಟಪಟ್ಟಿದೆ. ಈ ವೇಳೆ ನಾಯಿಯ ಕೊರಳಿಗೆ ಕಟ್ಟಿದ್ದ ಬೆಲ್ಟ್ ಬಿಚ್ಚಿಕೊಂಡಿದ್ದು. ನಾಯಿ ನೇರವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದಿದೆ. ಈ ದೃಷ್ಯ ನೋಡುವವರ ಎದೆ ಝಲ್ ಎನಿಸುವಂತಿದ್ದು. ಸದ್ಯ ಮೂಲಗಳ ಪ್ರಕಾಣ ನಾಯಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ವೈರಲ್ ಆಗಿರುವ ಈ ವಿಡಿಯೋ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಮಾಲೀಕರ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ರೈಲ್ವೆ ನಿಲ್ದಾಣಗಳಲ್ಲಿ ಇಂತಹ ಅಪಘಾತಗಳು ಸಂಭವಿಸದಂತೆ ತಡೆಗಟ್ಟಲು, ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಠಿಣ ನಿಯಮಗಳ ಅಗತ್ಯವನ್ನು ಹಲವಾರು ಕಾರ್ಯಕರ್ತರು ಒತ್ತಿ ಹೇಳಿದ್ದಾರೆ.