ಮಧ್ಯಪ್ರದೇಶ : ಇಂದು (ಏ.02) ಮೋದಿ ಸರ್ಕಾರದ ಬಹು ನಿರೀಕ್ಷಿತ ವಕ್ಷ್ ಬಿಲ್ ಮಂಡನೆಯಾಗಲಿದ್ದು. ಈ ಮಸೂದೆಗೆ ಬೆಂಬಲ ಸೂಚಿಸಿರುವ ಮಧ್ಯಪ್ರದೇಶದ ಮುಸ್ಲಿಂ ಮಹಿಳೆಯರು. ಪ್ರಧಾನಿ ಮೋದಿ ಪೋಟೊ ಹಿಡಿದು ಸಂಭ್ರಮಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇಂದು ವಕ್ಫ್ ಕಾಯ್ದೆ 1995ಕ್ಕೆ ತಿದ್ದುಪಡಿ ಮಸೂದೆಯನ್ನು ಇಂದು ಮಂಡಿಸಿದ್ದು. ಈ ಮಸೂದೆಯ ಕುರಿತು ಸುವಿಸ್ತಾರವಾಗಿ ಚರ್ಚೆ ನಡೆಸಿ. ಲೋಕಸಭೆಯಲ್ಲಿ ಈ ಮಸೂದೆಯನ್ನು ಪಾಸ್ ಮಾಡಲು ಎನ್ಡಿಎ ಮೈತ್ರಿಕೂಟ ಸಿದ್ದತೆ ನಡೆಸಿದೆ.
ಇದನ್ನೂ ಓದಿ :ಮೂರು ಯುವಕರ ಜೊತೆ ಯುವತಿ ಲವ್ವಿ-ಡವ್ವಿ; ಇದು ವೈಯಾರಿ ವೈಷ್ಣವಿಯ ಕಥೆ..!
ಈ ಮಸೂದೆ ಮಂಡನೆಗೆ ದೇಶದ ಕೆಲವೆಡೆ ಮುಸ್ಲಿಂ ಧರ್ಮಗುರುಗಳು, ಮೌಲ್ವಿಗಳು ವಿರೋಧ ವ್ಯಕ್ತಪಡಿಸಿದ್ದರೆ. ಭೂಪಾಲ್ನಲ್ಲಿ ಮುಸ್ಲಿಂ ಮಹಿಳೆಯರು ಈ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಕೈಯಲ್ಲಿ ಮೋದಿಗೆ ಬೆಂಬಲ ಸೂಚಿಸುವ ಪೋಸ್ಟರ್ಗಳನ್ನು ಹಿಡಿದುಕೊಂಡು, ಮೋದಿ ಪರ ಘೋಷಣೆ ಕೂಗಿರುವ ಮಹಿಳೆಯರು ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ.