Thursday, April 3, 2025

ಹಾಸನ ಜಿಲ್ಲೆಯಾದ್ಯಂತ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ..!

ಹಾಸನ : ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು. ಬೆಳಿಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಅನಿರೀಕ್ಷಿತ ಬೇಸಿಗೆ ಮಳೆಗೆ ಜನರು, ವಾಹನ ಸವಾರರು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಹೌದು.. ಬಿರು ಬೇಸಿಗೆಯಲ್ಲಿ ವರುಣ ಭೂಮಿಗೆ ತಂಪೆರೆದಿದ್ದಾನೆ. ಹಾಸನದ ಸಕಲೇಶಪುರ ತಾಲ್ಲೂಕಿನ ಹಲವೆಡೆ ಬೆಳಿಗ್ಗೆಯಿಂದ ಮಳೆಯಾಗುತ್ತಿದ್ದು. ಸಕಲೇಶಪುರ ಗ್ರಾಮದಲ್ಲಿ ಭಾರಿ ಮಳೆಯಾಗಿದೆ. ಹಾಸನದ ಹಲವೆಡೆ ಬಹುತೇಕ ಮೋಡ ಕವಿದ ವಾತವರಣವಿದ್ದು. ಅನಿರೀಕ್ಷಿತ ಮಳೆಗೆ ವಾಹನ ಸವಾರರು, ವಿದ್ಯಾರ್ಥಿಗಳ ಪರದಾಡುವಂತಾಗಿದೆ.

 ಇದನ್ನು ಓದಿ :ವಿಪಕ್ಷಗಳ ಗದ್ದಲದ ನಡುವೆ ಲೋಕಸಭೆಯಲ್ಲಿ ವಕ್ಫ್​ ತಿದ್ದುಪಡಿ ಮಸೂದೆ ಮಂಡಿಸಿದ ಕಿರಣ್​ ರಿಜಿಜು

ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರಿ ಹರಿಯುತ್ತಿದ್ದು. ಪಟ್ಟಣದ ಕೆಲವು ಅಂಗಡಿ, ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಅಜಾದ್ ರಸ್ತೆ, ಅಶೋಕ್ ರಸ್ತೆಯಲ್ಲಿ ಕೆಲ ಅಂಗಡಿಗಳಿಗೆ ನೀರು ನುಗ್ಗಿದ್ದು.
ಬಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.

RELATED ARTICLES

Related Articles

TRENDING ARTICLES