Thursday, April 3, 2025

ನಂಜನಗೂಡಿನ ನಂಜುಂಡೇಶ್ವನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ ತಾಯಿ ಮೀನಾ ತೂಗುದೀಪ್​

ಮೈಸೂರು : ನಟ ದರ್ಶನ್​ ತಾಯಿ ಮೀನಾ ತೂಗುದೀಪ್,​ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು. ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ನಟ ದರ್ಶನ್​ ತಾಯಿ ಮೀನಾ ತೂಗಿದೀಪ್​ ನಂಜುಂಡೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಸುಪ್ರೀಂ ಕೋರ್ಟ್​ನಲ್ಲಿ ರೇಣುಕಸ್ವಾಮಿ ಕೊಲೆ ಪ್ರಕರಣವನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು. ವಿಚಾರಣೆಯನ್ನು ಏಪ್ರೀಲ್​ 22ಕ್ಕೆ ಮುಂದೂಡಿದೆ.

ಇದನ್ನೂ ಓದಿ :ಬಸ್‌ ಚಾಲಕನಿಗೆ ಹೃದಯಾಘಾತ, ಪಾದಾಚಾರಿ ಮಹಿಳೆಗೆ ಬಸ್​ ಡಿಕ್ಕಿ: ಇಬ್ಬರು ಸಾ*ವು..!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ರಾಜ್ಯ ಹೈಕೋರ್ಟ್​ ಕೆಲ ತಿಂಗಳ ಹಿಂದೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿಕೊಂಡು ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಕಳೆದ ಎರಡು ಬಾರಿಯಿಂದ ವಿಚಾರಣೆಯನ್ನು ಮುಂದೂಡಿದ್ದ ನ್ಯಾಯಾಲಯ ಇಂದು ಮತ್ತೆ ವಿಚಾರಣೆಯನ್ನು ಏಪ್ರೀಲ್​ 22ಕ್ಕೆ ಮುಂದೂಡಿದೆ. ಇದರ ಬೆನ್ನಲ್ಲೆ ನಟ ದರ್ಶನ್​ ತಾಯಿ ನಂಜುಂಡೇಶ್ವರ ದರ್ಶನ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES