ಬೆಂಗಳೂರು : ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು. ಪ್ರತಿಭಟನೆ ವೇಳೆ ವಿಧಾನ ಪರಿಷತ್ ಸದಸ್ಯ ಸಿ,ಟಿ ರವಿ ಕಾಂಗ್ರೆಸ್ ಸರ್ಕಾರವ ಮೇಲೆ ವಾಗ್ದಾಳಿ ನಡೆಸಿದ್ದು. ಕಾಂಗ್ರೆಸ್ ಸರ್ಕಾರದ ತೆರಿಗೆ ನೀತಿಯನ್ನು ಕಟುವಾಗಿ ವಿರೋಧಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಸಿ,ಟಿ ರವಿ ರಾಜ್ಯ ಸರ್ಕಾರಕ್ಕೆ ರಾವಣನ ರೀತಿ 33 ತಲೆ, 66 ಕೈ ಇದೆ. ಇವರು ಅಧಿಕಾರಕ್ಕೆ ಇಳಿದ ಸಂಧರ್ಬದಿಂದ ಕೇವಲ ಲೂಟಿ ಮಾಡುತ್ತಿದ್ದಾರೆ. ಹಾಲಿನಲ್ಲಿ ಲೂಟಿ, ನೀರಿನಲ್ಲಿ ಲೂಟಿ, ವಿದ್ಯುತ್ ನಲ್ಲಿ ಲೂಟಿ, ಎಲ್ಲದರಲ್ಲೂ ಲೂಟಿ ಮಾಡುತ್ತಿದ್ದಾರೆ. ಬಹಿರಂಗವಾಗಿ ಭ್ರಷ್ಟಾಚಾರ ಮಾಡ್ತಿದ್ದಾರೆ. ಅಧಿಕಾರಕ್ಕೆ ಬರುವಾಗ ನಿನಗೂ ಫ್ರೀ, ನನಗೂ ಫ್ರೀ ಅಂದ್ರು. ಚುನಾವಣೆಗೂ ಮುನ್ನ ಇವರು ಬೆಲೆ ಏರಿಕೆ ಮಾಡ್ತೀವಿ ಅಂತ ಅವರು ಹೇಳಿರಲಿಲ್ಲ.ಒಂದು ವೇಳೆ ಚುನಾವಣೆ ಮುನ್ನವೇ ಹೇಳಿದ್ರೆ ಕಾಂಗ್ರೆಸ್ ಸರ್ಕಾರಕ್ಕೆ 136 ಅಲ್ಲ, 36 ಸೀಟು ಬರ್ತಿರಲಿಲ್ಲ. ರೈತರಿಗೆ ಪ್ರೋತ್ಸಾಹ ದನ ಕೊಡ್ತೀವಿ ಅಂದ್ರು, ಅದರ ಹೆಸರಿನಲ್ಲಿ 9 ರೂಪಾಯಿ ಹಾಲಿನ ದರ ಹೆಚ್ಚಳ ಮಾಡಿ, ರೈತರ ಕೈಗೆ ಚೊಂಬು ಕೊಟ್ಟರು.
ಇದನ್ನೂ ಓದಿ : ಹಾಸನ ಜಿಲ್ಲೆಯಾದ್ಯಂತ ಭಾರಿ ಮಳೆ; ಜನಜೀವನ ಅಸ್ತವ್ಯಸ್ತ..!
ಹೆಣದ ಮೇಲೂ ತೆರಿಗೆ ಹಾಕೋ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ, ಹಣ ನೋಡಿದ್ರೆ ಹೆಣ ಬಾಯಿ ಬಿಡೋದು ನೋಡಿದ್ದೋ, ಹೆಣದ ಮೇಲೂ ಟ್ಯಾಕ್ಸ್ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಸರ್ಕಾರ ಹಾಕದ ತೆರಿಗೆಯೇ ಇಲ್ಲದಂತಾಗಿದೆ. ಬಿಜೆಪಿಯವರು ದರ ಏರಿಕೆ ವಿರುದ್ದ ಹೋರಾಟ ಮಾಡ್ತೀವಿ ಅಂತ ಗೊತ್ತಿದ್ದ್ರು, ಡೀಸೆಲ್ ದರ ಹೆಚ್ಚಳ ಮಾಡಿದ್ದಾರೆ ಅಂದ್ರೆ ಇದು ಎಂತ ಭಂಡ ಸರ್ಕಾರ ಇರಬೇಕು ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಸಿ,ಟಿ ರವಿ ‘ಕಾಂಗ್ರೆಸ್ನಲ್ಲಿ ಜಗಳ ಇರೋದು ನಿನ್ ಕಲೆಕ್ಷನ್ ಎಷ್ಟು, ನನ್ ಕಲೆಕ್ಷನ್ ಎಷ್ಟು ಅಂತ. ಈ ಜನ ವಿರೋಧಿ ಸರ್ಕಾರ ತೊಲಗಬೇಕು. ಇವರ ಗ್ಯಾರಂಟಿಗಳಿಂದ ಮಹದೇವಪ್ಪನಿಗೂ ಬರೆ, ಕಾಕಾ ಪಾಟೀಲ್‌ಗೂ ಬರೆ. ಜಮೀರ್‌ಗೆ ಮಾತ್ರ ಬೆಣ್ಣೆ ಸಿಕ್ಕಿದೆ. ಈಗ ಸಂವಿಧಾನ ಬದಲಾವಣೆ ಮಾಡಬೇಕು ಅಂತ ಹೊರಟಿದ್ದಾರೆ. ಸಂವಿಧಾನ ಬದಲಾವಣೆ ಮಾಡೋಕೆ ಬಿಡೋದಿಲ್ಲ. ಸಂವಿಧಾನ ಉಳಿಸೋ ಕೆಲಸ ಮಾಡೋಣ ಎಂದು ಹೇಳಿದರು.