ಮೈಸೂರು : ಚಲಿಸುತ್ತಿದ್ದ ಬಸ್ನಲ್ಲಿ ಚಾಲಕನಿಗ ಹೃದಯಘಾತವಾಗಿದ್ದು. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಇತ್ತ ಹೃದಯಘಾತದಿಂದ ಬಸ್ ಚಾಲಕನು ಮೃತಪಟ್ಟಿದ್ದರೆ. ಮತ್ತೊಂದಡೆ ಪಾದಚಾರಿ ಮಹಿಳೆಯು ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೇರಳ ರಾಜ್ಯದ ಮಾನಂದವಾಡಿಯಿಂದ ಎಚ್.ಡಿ.ಕೋಟೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನಿಗೆ ಎಚ್ಡಿ ಕೋಟೆಯ ದಮ್ಮನಕಟ್ಟೆ ಬಳಿ ಹಠಾತ್ ಹೃದಯಘಾತ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಮಹಿಳೆ ಲಕ್ಷ್ಮಮ್ಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ :ಕಾಂಗ್ರೆಸ್ ಪಕ್ಷಕ್ಕೆ ಬೈದರೆ, ನಿಮ್ಮ ತಂದೆ-ತಾಯಿಗೆ ಬೈದಂತೆ ಸಮ: ಈಶ್ವರ್ ಖಂಡ್ರೆ
ಇತ್ತ ಬಸ್ ಚಾಲಕ ಸುನೀಲ್ ಕುಮಾರ್ ಕೂಡ ಹೃದಯಘಾತದಿಂದ ಬಸ್ನ ಸ್ಟೇರಿಂಗ್ ಮೇಲೆ ಪ್ರಾಣ ತ್ಯಜಿಸಿದ್ದು. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಸ್ ಪಕ್ಕದ ಜಮೀನಿಗೆ ನುಗ್ಗಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತದೇಹಗಳನ್ನು ಎಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಘಟನೆ ಸಂಬಂಧ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.