Thursday, April 3, 2025

ಮೂರು ಯುವಕರ ಜೊತೆ ಯುವತಿ ಲವ್ವಿ-ಡವ್ವಿ; ಇದು ವೈಯಾರಿ ವೈಷ್ಣವಿಯ ಕಥೆ..!

ಮಂಡ್ಯ : ಒಬ್ಬನ ಜೊತೆ ನಿಶ್ಚಿತಾರ್ಥ, ಇನ್ನೊಬ್ಬನ ಜೊತೆ ಸಂಸಾರ, ಮತ್ತೊಬ್ಬನ ಜೊತೆ ಮದುವೆ, ಈ ರೀತಿ ಯುವತಿಯೊಬ್ಬಳು ಮೂವರು ಯುವಕರಿಗೆ ಪ್ರೀತಿ ಹೆಸರಲ್ಲಿ ನಂಬಿಸಿ ಮೋಸ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಮೋಸಗಾತಿ ಯುವತಿಯನ್ನು ವೈಷ್ಣವಿ ಎಂದು ಗುರುತಿಸಲಾಗಿದೆ.

ಹೌದು.. ಮಂಡ್ಯದ ಮದ್ದೂರು, ತಾಲ್ಲೂಕಿನ ಕೆಸ್ತೂರು ಗ್ರಾಮದ ಯುವತಿ ವೈಷ್ಣವಿ ಎಂಬಾಕೆ ಮೂವರನ್ನು ವಂಚಿಸಿದ್ದು. ಮೊದಲಿಗೆ ಈಕೆ  ಹಾಸನದ ರಘು ಎಂಬಾತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಸುಮಾರು ಐದು ವರ್ಷಗಳ ಕಾಲ ಪ್ರೀತಿ ಮಾಡಿದ್ದ ಇಬ್ಬರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ಎರಡು ವರ್ಷದ ಹಿಂದೆ ಧರ್ಮಸ್ಥಳದಲ್ಲಿ ರಘು ವೈಷ್ಣವಿ ಜೊತೆ ಮದುವೆಗೆ ಅದ್ದೂರಿಯಾಗಿ ತಯಾರಿ ನಡೆಸಿದ್ದನು. ಆದರೆ ಮದುವೆ ದಿನ ರಘು ಮನೆಯವರು ಕೊಟ್ಟ ಸೀರೆ, ಒಡವೆ ಜೊತೆ ವೈಷ್ಣವಿ ಪರಾರಿಯಾಗಿದ್ದಳು.

ಶಿವು ಎಂಬ ಯುವಕನ ಜೊತೆ ಮದುವೆ ದಿನ ಧರ್ಮಸ್ಥಳದಿಂದ ಪರಾರಿಯಾಗಿದ್ದ ವೈಷ್ಣವಿ. ರಘು ಪ್ರೀತಿಗೆ ಎಳ್ಳು, ನೀರು ಬಿಟ್ಟು, ಶಿವು ಜೊತೆ ಪ್ರೀತಿ ಮಾಡಲು ಶುರು ಮಾಡಿದ್ದಳು. ಇಬ್ಬರು ಜೊತೆಯಾಗಿ ಸಂಸಾರವನ್ನು ನಡೆಸುತ್ತಿದ್ದಳು. ಆದರೆ ಕಳೆದ ಒಂದು ವರ್ಷದ ಹಿಂದೆ ಶಿವು-ವೈಷ್ಣವಿ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಶಿವು ಜೊತೆ ಮುನಿಸಿಕೊಂಡಿದ್ದ ವೈಷ್ಣವಿ ತವರು ಮನೆ ಸೇರಿದ್ದಳು.

ಇದನ್ನೂ ಓದಿ :ವಿಧಿ ಇಲ್ಲದೆ ನೀರಿನ ಬೆಲೆ ಹೆಚ್ಚಿಗೆ ಮಾಡುತ್ತಿದ್ದೇವೆ ; ಡಿಕೆ ಶಿವಕುಮಾರ್

ತವರು ಮನೆ ಸೇರಿದ್ದ ವೈಷ್ಣವಿಗೆ ಮಂಡ್ಯದ ಶಶಿ ಎಂಬಾತನ ಪರಿಚಯವಾಗಿತ್ತು. ಫೈನಾನ್ಸ್​ ವಿಚಾರದಲ್ಲಿ ಇಬ್ಬರು ಪರಿಚಯವಾಗಿ, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ವೈಷ್ಣವಿ ಪ್ರೀತಿಯಲ್ಲಿ ಶಶಿ ಮುಳುಗಿದ್ದ ಸಂಧರ್ಬದಲ್ಲಿ ವೈಷ್ಣವಿ ಮತ್ತೆ ಹಳೆ ಲವ್ವರ್​ ಶಿವು ಜೊತೆಗೆ ಸಂಸಾರ ಪುನರ್​ ಆರಂಭಿಸಿದ್ದಳು. ಬೆಂಗಳೂರಲ್ಲಿ ಓದುತ್ತಿದ್ದೇನೆ ಎಂದು ಶಶಿಗೆ ಕಥೆ ಹೇಳಿದ್ದ ವೈಷ್ಣವಿ. ಪಿಜಿ ಬಾಡಿಕೆ, ಮೊಬೈಲ್ ಖರ್ಚು ಎಂದು ಪ್ರತಿ ತಿಂಗಳು ಶಶಿಯಿಂದ ಹಣ ಪಡೆಯುತ್ತಿದ್ದಳು.

ಕಳೆದ ಮಾರ್ಚ್​ 24ರಂದು ಶಶಿ ಮತ್ತು ವೈಷ್ಣವಿ ಇಬ್ಬರು ಆದಿಚುಂಚನಗಿರಿಯಲ್ಲಿ ಶಾಸ್ತ್ರೋಕ್ತವಾಗಿ ಇಬ್ಬರು ಮದುವೆಯಾಗಿದ್ದರು. ಆದರೆ ಮದುವೆಯಾದ 24 ಗಂಟೆಗಳಲ್ಲೇ ವೈಷ್ಣವಿ ಶಶಿಗೆ ಪಂಗನಾಮ ಹಾಕಿ ಶಿವು ಜೊತೆ ಪರಾರಿಯಾಗಿದ್ದಳು. ವೈಷ್ಣವಿ ಪ್ರೀತಿಗೆ ಮರುಳಾಗಿ 15 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದ ಶಶಿ, ಬೇರೆಯಾರಿಗೂ ಈ ರೀತಿಯಾಗಬಾರದು ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾನೆ.

ವೈಷ್ಣವಿ ಲವ್, ಮನಿ, ದೋಖಾ ವಿರುದ್ದ ಪ್ರಿಯಕರ ಶಶಿ ಆಕ್ರೋಶ ವ್ಯಕ್ತಪಡಿಸಿದ್ದು. ಘಟನೆ ಸಂಬಂಧ ಮಂಡ್ಯದ ಮಹಿಳಾ ಪೊಲೀಸ್​ ಠಾಣೆ ಮತ್ತು ಮಂಡ್ಯ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ವೈಯಾರದಿಂದಲೇ ಮೂವರು ಯುವಕರ ಬಾಳಲ್ಲಿ ಚೆಲ್ಲಾಟವಾಡಿದ್ದ ವೈಷ್ಣವಿಗೆ ತಕ್ಕ ಶಿಕ್ಷೆ ಆಗುವಂತೆ ಶಶಿ ಮನವಿ ಮಾಡಿದ್ದಾನೆ.

RELATED ARTICLES

Related Articles

TRENDING ARTICLES