ಬೆಳಗಾವಿ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಪಕ್ಷ ಕಟ್ಟುತ್ತಾರೆ ಎಂಬ ವಿಚಾರದ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು. ಯತ್ನಾಳ್ ಹೊಸ ಪಕ್ಷ ಕಟ್ಟಲ್ಲ, ಅವರು ಬಿಜೆಪಿಯಲ್ಲೇ ಇರ್ತಾರೆ ಎಂದು ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದ್ದು. 6 ವರ್ಷಗಳ ಕಾಲ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಈ ಕುರಿತು ಯತ್ನಾಳ್ ಕೂಡ ಮಾತನಾಡಿದ್ದು, ವಿಜಯೇಂದ್ರ ಮತ್ತು ಯಡಿಯೂರಪ್ಪ ಮೇಲೆ ವಾಗ್ದಾಳಿ ನಡೆಸಿದ್ದರು. ಜೊತೆಗೆ ಹೊಸ ಹಿಂದೂ ಪಕ್ಷವನ್ನು ರಾಜ್ಯದಲ್ಲಿ ಕಟ್ಟುತ್ತೇನೆ. ಬರುವ ವಿಜಯದಶಮಿಗೆ ಹೊಸ ಪಕ್ಷವನ್ನು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ :ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯುತ್ತಾರಾ ಅಣ್ಣಾಮಲೈ..!
ಇದೀಗ ಈ ಕುರಿತು ಯತ್ನಾಳ್ ಆಪ್ತ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದು. ಯತ್ನಾಳ ಹೊಸ ಪಕ್ಷ ಕಟ್ಟಲ್ಲ ಬಿಜೆಪಿಯಲ್ಲೇ ಮುಂದುವರೆಯುತ್ತಾರೆ. ಯತ್ನಾಳ ಬಿಜೆಪಿಗೆ ವಾಪಸ್ ಬರ್ತಾರೆ, ಯತ್ನಾಳ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ, ಮಾಧ್ಯಮದಲ್ಲಿ ಬಂದಿರೋದೆ ಬೇರೆ, ಬಿಜೆಪಿಯಲ್ಲಿ ಯತ್ನಾಳ ಮುಂದುವರೆಯವ ವಿಶ್ವಾಸವಿದೆ, ಅವರು ಎಲ್ಲಿಯೂ ಹೋಗಲ್ಲ ಎಂದು ರಮೇಶ್ ಜಾರಕಿಹೊಳಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.