Wednesday, April 2, 2025

ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಕೊಟ್ಟಾಗ, ಆ ಪ್ರಶಸ್ತಿಗೆ ಶಕ್ತಿ ಬರುತ್ತದೆ: ವಿ. ಸೋಮಣ್ಣ

ತುಮಕೂರು : ಶ್ರೀ ಸಿದ್ದಗಂಗಾ ಮಠದ ಶ್ರೀಗಳ 118ನೇ ಗುರುವಂದನ ಕಾರ್ಯಕ್ರಮದ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡುವ ಕುರಿತು ಮಾತನಾಡಿದ್ದು. ಶ್ರೀಗಳಿಗೆ ಭಾರತ ರತ್ನ ನೀಡಿದಾಗ ಮಾತ್ರವೇ ಆ ಪ್ರಶಸ್ತಿಗೆ ಒಂದು ಶಕ್ತಿ ಬರುತ್ತದೆ ಎಂದು ಹೇಳಿದರು.

ಸಿದ್ದಗಂಗಾ ಮಠದಲ್ಲಿ ಮಾತನಾಡಿದ ಕೇಂದ್ರ ಸಚಿವ ಸೋಮಣ್ಣ ‘ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂದು ನಾವು ಬಯಸುತ್ತೇವೆ. ಈ ಕುರಿತು ಅನೇಕರು ಅನೇಕ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಸಿದ್ದಗಂಗಾ ಮಠಕ್ಕೆ ಶ್ರೀಗಳು ಇದ್ದಾಗ ಅನೇಕ ಪ್ರಧಾನಿಗಳು ಬಂದಿದ್ದರು. ಇವತ್ತು ರಾಷ್ಟ್ರದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಬರ್ತಿದ್ದಾರೆ. ಸ್ವಾಮೀಜಿ ಇನ್ನು ಜೀವಂತವಾಗಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

ಇದನ್ನೂ ಓದಿ : ತಾಯ್ನಾಡಿಗೆ ವಾಪಸ್ ಬರುವ ಭರವಸೆ ಇದೆ; ಸುನೀತಾ ವಿಲಿಯಮ್ಸ್ ಮೊದಲ ಪ್ರತಿಕ್ರಿಯೆ

ಶ್ರೀಗಳು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಮೊದಲಿನಿಂದಲ್ಲೂ ಶ್ರೀಗಳಿಗೆ ಭಾರತ ರತ್ನ ಕೊಡಬೇಕು ಎಂದು ವಿನಂತಿ ಮಾಡ್ಕೊಂಡು ಬಂದಿದ್ದೇನೆ. ಭಾರತ ರತ್ನವನ್ನು ಗುರುಗಳಿಗೆ ಕೊಟ್ಟಾಗ. ಭಾರತ ರತ್ನಕ್ಕೆ ಶಕ್ತಿ ಬರುತ್ತದೆ. ಶ್ರೀಗಳು ಕೇವಲ ಭಾರತ ರತ್ನವಲ್ಲ, ಅವರು ವಿಶ್ವ ರತ್ನ ಎಂದು ಹೇಳಿದರು.

ತುಮಕೂರು ರೈಲ್ವೇ ನಿಲ್ದಾಣಕ್ಕೆ ಸ್ವಾಮೀಜಿ ಹೆಸರಿಡುವ ವಿಚಾರ..!

ತುಮಕೂರು ರೈಲ್ವೇ ನಿಲ್ದಾಣಕ್ಕೆ ಸ್ವಾಮೀಜಿ‌ ಹೆಸರಿಡುವ ವಿಚಾರವಾಗಿ ಮಾತನಾಡಿದ ವಿ. ಸೋಮಣ್ಣ  ‘ಸಿದ್ದರಾಮಯ್ಯ ನಾಳೆ ದೆಹಲಿಗೆ ಬರ್ತಿದ್ದಾರೆ, ದೆಹಲಿಯಲ್ಲಿ ಕನ್ನಡ ಭವನ ಉದ್ಘಾಟನೆಗೆ ಬರ್ತಿದ್ದಾರೆ. ಈ ವಿಷಯದ ಕುರಿತು ಪರಮೇಶ್ವರ್, ರಾಜಣ್ಣ, ಡಿಸಿಎಂ ಶಿವಕುಮಾರ್ ಅವರ ಗಮನಕ್ಕೂ ತರುತ್ತೇನೆ. ನಾಳೆ ಸ್ವತಃ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೀನಿ. ಪೈಲ್ ಕಳುಹಿಸಿ ಐದು ತಿಂಗಳ ಮೇಲಾಗಿದೆ. ನಾನು ಇದಕ್ಕೆ ಉಪ್ಪುಖಾರ ಹಾಕಲ್ಲ. ಶ್ರೀ ಮಠ ಯಾರಿಗೂ ಸೀಮಿತವಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES