ಬೆಂಗಳೂರು : ನಾಳೆಯಿಂದ ಬೆಂಗಳೂರಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗಲಿದ್ದು. ಪಂದ್ಯ ನೋಡಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಅನುಕೂಲವಾಗುವಂತೆ ಬಿಎಂಆರ್ಸಿಎಲ್ ಮೆಟ್ರೋ ರೈಲು ಸೇವೆಯ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಹೌದು.. ಕ್ರಿಕೆಟ್ ಅಭಿಮಾನಿಗಳ ಹಬ್ಬವೆಂದೇ ಪರಿಗಣಿಸುವ ಐಪಿಎಲ್2025 ಆರಂಭವಾಗಿ ವಾರ ಕಳೆದಿದೆ. ಐಪಿಎಲ್ ಎಂದರೆ ಅಲ್ಲಿ ಬೆಂಗಳೂರು ಪ್ರಮುಖ ಆಕರ್ಷಣೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಾಟಗಳು ಸಾಕಷ್ಟು ರೋಚಕತೆಗೆ ಸಾಕ್ಷಿಯಾಗಿರುವುದನ್ನು ನಾವು ಕಾಣುತ್ತೇವೆ. ಬೆಂಗಳೂರು ಚರಣದ ಐಪಿಎಲ್ ಪಂದ್ಯಗಳು ನಾಳಿನಿಂದ ಆರಂಭವಾಗಲಿದ್ದು. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಬಿಎಂಆರ್ಸಿಎಲ್ ಮೆಟ್ರೋ ಸೇವೆ ಅವಧಿಯನ್ನು ಮಧ್ಯರಾತ್ರಿ 12:30 ಸಮಯದವರೆಗೂ ವಿಸ್ತರಿಸಿದೆ.
ಇದನ್ನೂ ಓದಿ :ಯತ್ನಾಳ್ ಹೊಸ ಪಕ್ಷ ಕಟ್ಟಿ ಗೆದ್ದರೆ ನಾನೇ ಸನ್ಮಾನ ಮಾಡ್ತೀನಿ : ರೇಣುಕಾಚಾರ್ಯ
ಏಪ್ರಿಲ್ 2ರಿಂದ ಬೆಂಗಳೂರು ಚರಣದ ಪಂದ್ಯಗಳು ಆರಂಭವಾಗಲಿದ್ದು. ಈ ತಿಂಗಳ 10,18,24ನೇ ತಾರೀಕು ಹಾಗೂ ಮೇ 3, 13, 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೆಂಗಳೂರು ಪಂದ್ಯಗಳು ನಡೆಯಲಿವೆ. ಬೆಂಗಳೂರಿನಲ್ಲಿ ಪಂದ್ಯ ನಡೆಯುವ ದಿನದಂದು ಮೆಟ್ರೋ ಸೇವಾವಧಿಯನ್ನು ವಿಸ್ತರಿಸಿದ್ದು. ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ.
ವೈಟ್ ಫೀಲ್ಡ್ (ಕಾಡುಗೋಡಿ),ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆ 12.30 ರವರೆಗೆ ವಿಸ್ತರಣೆಯಾಗಿದೆ. ಪಂದ್ಯವಿರದ ದಿನದಂದು ಎಂದಿನಂತೆ 11:30ರವರೆಗೂ ಮೆಟ್ರೋ ಸಂಚಾರವಿರಲಿದೆ ಎಂದು BMRCL ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.