ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾಳನ್ನು ಬಾಲಿವುಡ್ ಸೂಪರ್ ಸ್ಟಾರ್ ಮಾಡುವುದಾಗಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು. ಸನೋಜ್ ಮಿಶ್ರಾನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು.. ಕುಂಭಮೇಳದ ಬೆಡಗು ಕಣ್ಣಿನ ಸುಂದರಿ ಮೊನಾಲಿಸಳಿಗೆ ಬಾಲಿವುಡ್ನಿಂದ ಸಾಕಷ್ಟು ಆಫರ್ಗಳು ಬಂದಿದ್ದವು. ಅದರಲ್ಲಿ ನಿರ್ದೇಶಕ ಮನೋಜ್ ಮಿಶ್ರಾ ಕೂಡ ತಮ್ಮ ನಿರ್ದೇಶನದ ಸಿನಿಮಾಗೆ ಮೊನಾಲಿಸಳನ್ನು ನಟಿಯಾಗಿ ಆಯ್ಕೆ ಮಾಡಿದ್ದಾಗಿ ಹೇಳಿಕೊಂಡು ಪ್ರಚಾರ ಪಡೆದಿದ್ದ. ಇದೀಗ ಈತನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ…!
2020ರಲ್ಲಿ ಝಾನ್ಸಿ ಮೂಲದ ಯುವತಿಯನ್ನು ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಸನೋಜ್ ಮಿಶ್ರಾ ಪರಿಚಯ ಮಾಡಿಕೊಂಡಿದ್ದರು. ಬಳಿಕ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದರು. 2021ರ ಜೂನ್ 17ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ ತಮ್ಮನ್ನು ಭೇಟಿ ಮಾಡುವಂತೆ ಸನೋಜ್ ಮಿಶ್ರಾ ಕೇಳಿಕೊಂಡಿದ್ದರು. ಆದರೆ ಆ ಯುವತಿ ನಿರಾಕರಿಸಿದಾಗ, ಒಂದು ವೇಳೆ ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸನೋಜ್ ಬೆದರಿಕೆ ಹಾಕಿದ್ದನು.
ಇದನ್ನೂ ಓದು :ಪಂಚ ಗ್ಯಾರಂಟಿಗಳಿಂದ ಬಿಜೆಪಿಯವರಿಗೆ ಭೇದಿ ಆಗಿದೆ; ಭೀಮಾ ನಾಯ್ಕ್
ಯುವತಿ ಎಲ್ಲಿ ಸನೋಜ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೋ ಎಂಬ ಭಯದಿಂದ 2021ರ ಜೂನ್ 18ರಂದು ಈತನನ್ನು ಭೇಟಿಯಾಗಿದ್ದಳು. ಈ ವೇಳೆ ಸನೋಜ್ ಯುವತಿಯನ್ನು ರೆಸಾರ್ಟ್ಗೆ ಕರೆದುಕೊಂಡು ಹೋಗಿ ಮತ್ತು ಬರುವ ಔಷದ ನೀಡಿ ಲೈಂಗಿಕ ದೌರ್ಜನ್ಯ ಎಸೆಗಿದ್ದ. ಅದರ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಸನೋಜ್ ಮಿಶ್ರಾ ಯುವತಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂಬುದನ್ನು ದೂರಿನಲ್ಲಿ ತಿಳಿಸಲಾಗಿದೆ.
ಇದಾದ ನಂತರ ಸನೋಜ್ ಯುವತಿಯ ಮೇಲೆ ಸಾಕಷ್ಟು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದು. ಮದುವೆ ಆಗುವುದಾಗಿ ನಂಬಿಸಿ ಜೊತೆಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಈ ರೀತಿ ಮಾಡಲಾಗಿದೆ ಎಂದು ಯುವತಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದು. ಆರೋಪಿ ಸನೋಜ್ ಮಿಶ್ರಾನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.