Wednesday, April 2, 2025

ಮಟನ್​ ಚೀಟಿ ಗೋಲ್​ಮಾಲ್, ಹೊಸತೊಡಕಿನ ಸಂಭ್ರಮದಲ್ಲಿದ್ದ ಜನರಿಗೆ ಪಂಗನಾಮ

ಕೋಲಾರ : ಯುಗಾದಿಯ ಹೊಸತೊಡಕಿಗೆ ಎಂದು ಮಟನ್​ ಚೀಟಿ ಹಾಕಿದ್ದ ಜನರಿಗೆ ವ್ಯಕ್ತಿಯೋರ್ವ ಪಂಗನಾಮ ಹಾಕಿರುವ ಘಟನೆ ಕೋಲಾರದಲ್ಲಿ ನಡೆದಿದ್ದು. ಸುಮಾರು ನಾಲ್ಕೈದು ಸಾವಿರ ಜನರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಕೋಲಾರದ ಬಂಗಾರಪೇಟೆಯಲ್ಲಿ ಈ ಗೋಲ್​ ಮಾಲ್​ ನಡೆದಿದ್ದು. ಭರತ್​ ಎಂಬಾತ ಯುಗಾದಿ ಹೊಸತೊಡಕಿಗೆ ಎಂದು ಜನರ ಬಳಿಯಲ್ಲಿ ಮಾಂಸದ ಚೀಟಿ ಹಾಕಿಸಿಕೊಂಡಿದ್ದನು. ಸುಮಾರು ನಾಲ್ಕೈದು ಸಾವಿರ ಜನರ ಬಳಿಯಲ್ಲಿ ತಲಾ ಎರಡು ಸಾವಿರ ಸಂಗ್ರಹಿಸಿರುವ ಭರತ್​ ಇಂದು ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡು ಕಾಣೆಯಾಗಿದ್ದಾನೆ.

ಇದನ್ನೂ ಓದಿ :ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ: ಯತ್ನಾಳ್​

ಇಂದು ಬೆಳಿಗ್ಗೆ ಜನರು ಮಾಂಸ ಪಡೆಯಲು ಎಂದು ಅಂಗಡಿ ಮುಂದೆ ಜಮಾಯಿಸಿದ್ದು. ಭರತ್​ ಇಲ್ಲದ್ದನ್ನು ಕಂಡು ಭರತ್​ಗೆ ಕರೆ ಮಾಡಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಜನರಿ ಟೋಕನ್​ ಹಿಡಿದುಕೊಂಡು ಅಂಗಡಿ ಎದರು ಭರತ್​ಗೆ ಹಿಡಿಶಾಪ ಹಾಕಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಯುಗಾದಿಯ ಹೊಸತೊಡಕಿನಂದು ಮಾಂಸ ಸೇವಿಸುವ ಆಸೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ.

 

RELATED ARTICLES

Related Articles

TRENDING ARTICLES