Wednesday, April 2, 2025

ಯತ್ನಾಳ್ ಹೊಸ ಪಕ್ಷ ಕಟ್ಟಿ ಗೆದ್ದರೆ ನಾನೇ ಸನ್ಮಾನ ಮಾಡ್ತೀನಿ : ರೇಣುಕಾಚಾರ್ಯ

ದಾವಣಗೆರೆ : ಬಿಜೆಪಿ ಉಚ್ಚಾಟಿತ ಶಾಸಕ ಯತ್ನಾಳ್​ ಹೊಸ ಪಕ್ಷ ಕಟ್ಟುತ್ತೇನೆ ಎಂಬ ವಿಚಾರದ ಕುರಿತು ಮಾಜಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು. ಒಂದು ವೇಳೆ ಯತ್ನಾಳ್​ ಹೊಸ ಪಕ್ಷ ಕಟ್ಟಿಗೆದ್ದು ಬಂದರೆ ನಾನೇ ಅವರಿಗೆ ಸನ್ಮಾನ ಮಾಡುತ್ತೇನೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಯತ್ನಾಳ್​ ವಿರುದ್ದ ಕಿಡಿಕಾರಿದ್ದು.
‘ಯತ್ನಾಳ್ ಪಕ್ಷ ಕಟ್ಟಿದ್ರೆ ಸಂತೋಷ, ಬಿಎಸ್​ವೈನ ಟೀಕೆ ಮಾಡಿದ್ರೆ ಸಿಎಂ ಆಗಲ್ಲಾ. ನೀವೂ ಸ್ವಯಂ ಘೋಷಿತ ನಾಯಕರಾಗಬೇಡಿ, ಜನ ಮೆಚ್ಚಿದ ನಾಯಕರಾಗಬೇಕು. ರಾಜೀನಾಮೇ ಕೊಟ್ಟು ಚುನಾವಣೆಯಲ್ಲಿ ಸ್ಪರ್ಧಿಸಿ ಹೆದ್ದು ಬಂದರೆ, ಹಿಂದು ಹುಲಿಗೆ ಸನ್ಮಾನ ಮಾಡುತ್ತೇವೆ. ಯತ್ನಾಳ್​ಗೆ ಠೇವಣಿಯೂ ಸಿಗಲ್ಲಾ, 224 ಕ್ಷೇತ್ರಗಳಲ್ಲು ಅವರು ಅಡ್ರೆಸ್ಗೆ ಇಲ್ಲದಂತೆ ಆಗ್ತಾರೆ ಎಂದು ಹೇಳಿದರು.

ಇದನ್ನೂ ಓದಿ :ಮಟನ್​ ಚೀಟಿ ಗೋಲ್​ಮಾಲ್, ಹೊಸತೊಡಕಿನ ಸಂಭ್ರಮದಲ್ಲಿದ್ದ ಜನರಿಗೆ ಪಂಗನಾಮ

ಯತ್ನಾಳ್​ ಹಿಂದೂ ಪಕ್ಷ ಕಟ್ಟ್ತೀನಿ ಎಂದು ಹೇಳಿದ್ದಾರೆ, ಅಂದರೆ ನಾವ್ಯಾರು ಹಿಂದೂಗಳಲ್ವಾ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳೋಕೆ ಯತ್ನಾಳ್​ ಏಕಪಾತ್ರಭಿಯನ ಮಾಡ್ತಾರೆ. ಹಿಂದೂ ಹುಲಿ ಎಂದು ತಮ್ಮನ್ನು ತಾವು ಪ್ರಚಾರ ಮಾಡಿಕೊಂಡಿದ್ದಾರೆ. ಅವರ ಕುರಿತು ಸಮಯ ಬಂದಾಗ ಎಲ್ಲವೂ ತಿಳಿಯುತ್ತೆ. ಹಿಂದುತ್ವ ಎಂದು ಜೆಡಿಎಸ್​ಗೆ ಯಾಕೆ ಹೋಗಿದ್ದೀರಿ, ಟಿಪ್ಪು ಅವತಾರ ಯಾಕೆ ತಾಳಿದ್ದೀರಿ. ಇಫ್ತಾರ್​ ಕೂಟದಲ್ಲಿ ಯಾಕೆ ಭಾಗಿಯಾಗಿದ್ರಿ. ನೀವು ಹಿಂದೂ ಹುಲಿ ಅಲ್ಲ, ಇಲಿ.

ಆಚಾರದಲ್ಲಿ ಹಿಂದುತ್ವ ಇರಬೇಕು, ಪ್ರಚಾರದಲ್ಲಿ ಅಲ್ಲ, ಬಿಎಸ್​ವೈ ಮಠ ಮಾನ್ಯಗಳಿಗೆ ಹಣ ಕೊಟ್ರು ಯತ್ನಾಳ್ ನಕಲಿ ಹಿಂದೂ. ಬಿಜಾಪುರದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಗೊತ್ತಿದೆ. ಅವರ ಹರಕು ಬಾಯಿಯಿಂದ ಈ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬರೋಕೆ ನೀವೆ ಕಾರಣ. ನೀವು ಬಿಎಸ್​ವೈ ಕಾಲು ಹಿಡಿದ ಆಡಿಯೋ ವಿಡಿಯೋ ಬಿಡುಗಡೆ ಮಾಡ್ಬೇಕ ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದರು.

RELATED ARTICLES

Related Articles

TRENDING ARTICLES