Wednesday, April 2, 2025

ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ: ಯತ್ನಾಳ್​

ವಿಜಯಪುರ : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಮ್ಮ ಉಚ್ಚಾಟನೆ ಕುರಿತು ಹೇಳಿಕೆ ನೀಡಿದ್ದು. ನನ್ನನ್ನು ಬಿಜೆಪಿ ಕರೆದುಕೊಳ್ಳಿ ಎಂದು ನಾನು ಯಾರ ಕೈಕಾಲು ಹಿಡಿಯಲ್ಲ. ನನ್ನ ಪರವಾಗಿ ಸಾಕಷ್ಟು ಜನ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ತಮ್ಮ ಉಚ್ಚಾಟನೆಯ ಕುರಿತು ಹೇಳಿಕೆ ನೀಡಿದ್ದು. ‘ ಮತ್ತೆ ನನ್ನನ್ನು ಪಕ್ಷಕ್ಕೆ ತೆಗೆದುಕೊಳ್ಳಿ ಎಂದು ಕೈ ಮುಗಿಯಲ್ಲ. ಯಾವುದೇ ಹೈಕಮಾಂಡ್ ನಾಯಕರನ್ನ ನಾನು ಭೇಟಿ ಮಾಡೋದಿಲ್ಲ. ನಾನು ಬಿಜೆಪಿಗೆ ಸೇರಿಸಿಕೊಳ್ಳಿ ಎಂದು ಯಾರ ಕೈಕಾಲು ಹಿಡಿಯೋದಿಲ್ಲ. ನನ್ನ ಪರವಾಗಿ ಸಾಕಷ್ಟು ಜನರು ನಿಂತಿದ್ದಾರೆ. ಜನರೇ ನನಗೆ ಹೈಕಮಾಂಡ್ ಎಂದು ಹೇಳಿದರು.

ಇದನ್ನೂ ಓದಿ :2028ಕ್ಕೆ ನಾನೇ ಸಿಎಂ, ಗೋಮಾತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ; ಯತ್ನಾಳ್​

ವಿಜಯೆಂದ್ರ ಅಹೋರಾತ್ರಿ ಹೋರಾಟ ವಿಚಾರ

ರಾಜ್ಯ ಕಾಂಗ್ರೆಸ್​ ವಿರುದ್ದ ವಿಜಯೇಂದ್ರ ಹೋರಾಟದ ಬಗ್ಗೆ ವ್ಯಂಗ್ಯವಾಡಿದ ಯತ್ನಾಳ್​ ‘ ವಿಜಯೇಂದ್ರ ಅಡ್ಜಸ್ಟಮೆಂಟ್​ ಇಲ್ಲದೆ ಹೋರಾಟ ಮಾಡಲಿ. ಸಿದ್ದರಾಮಯ್ಯ, ಡಿಕೆಶಿಗೆ ಫೋನ್ ಮಾಡಿ ಅನುಮತಿ ಪಡೆದು ಹೋರಾಟ ಮಾಡಿದರೆ ಏನು ಪ್ರಯೋಜನ ಎಂದು ಯತ್ನಾಳ್​ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ‌ಹೋಗ್ತಿರಾ ಪ್ರಶ್ನೆಗೆ ಉತ್ತರ ನೀಡಿದ ಶಾಸಕ ಯತ್ನಾಳ್. ‘ನಾನು ಸತ್ತರು ನನ್ನ ಹೆಣ ಕಾಂಗ್ರೆಸ್ ಕಚೇರಿ ರಸ್ತೆಯ ಮುಂದೆ ಮೆರವಣಿಗೆ ಮಾಡಬೇಡಿ ಎಂದು ಉಯಿಲು ಬರೆದಿಡುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES