ಚಿತ್ರದುರ್ಗ : ಟಿಟಿ ವಾಹನ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದ್ದು.ಯುಗಾದಿ ಹಬ್ಬಕ್ಕೆ ಎಂದು ಮನೆಗೆ ತೆರೆಳುತ್ತಿದ್ದ ಮೂವರು ಮಸಣಕ್ಕೆ ಸೇರಿದ್ದಾರೆ.
ಯುಗಾದಿ ಹಬ್ಬದ ಹಿನ್ನಲೆ ಒಂದೇ ಕುಟುಂಬದ 8 ಜನ ಟಿಟಿಯಲ್ಲಿ ಸ್ವಗ್ರಾಮವಾದ ಚಳ್ಳಕೆರೆ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಚಿತ್ರದುರ್ಗದ ಹೆಗ್ಗರೆ ಗೇಟ್ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕುಮಾರನಾಯ್ಕ(45), ಶ್ವೇತ (38), ಶಂಕ್ರಿ ಬಾಯಿ(65) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ :ಯುಗಾದಿ ಸಂಭ್ರಮದಲಿದ್ದ ಮನೆಯಲ್ಲಿ ಸೂತಕದ ಛಾಯೆ; ಮೂವರು ಸಾ*ವು..!
ಮೃತರೆಲ್ಲರೂ ಕೂಲಿ ಕೆಲಸಕ್ಕೆ ಎಂದು ಬೆಂಗಳೂರಿಗೆ ಬಂದಿದ್ದರು. ಹಬ್ಬಕ್ಕೆ ಎಂದು ಟಿಟಿ ಬಾಡಿಗೆ ಮಾಡಿಕೊಂಡು ಸ್ವಗ್ರಾಮಕ್ಕೆ ತೆರೆಳುತ್ತಿದ್ದ ವೇಳೆ ದುರಂತ ಸಂಭವಿಸಿದ್ದು. ಘಟನಾ ಸ್ಥಳಕ್ಕೆ ಚಳ್ಳಕರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.