ವಿಜಯನಗರ : ತಂದೆ ಸತ್ತಿರುವ ನೋವಿನಲ್ಲೂ ವಿದ್ಯಾರ್ಥಿಯೊಬ್ಬ SSLC ಪರೀಕ್ಷೆಗೆ ಹಾಜರಾಗಿದ್ದು. ವಿದ್ಯಾರ್ಥಿಯನ್ನು ಹರಿಧರನ್ ಎಂದು ಗುರುತಿಸಲಾಗಿದೆ.
ವಿಧ್ಯಾರ್ಥಿ ಹರಿಧರನ್ ತಂದೆ ಸೆಲ್ವಕುಟ್ಟಿ ತಮಿಳುನಾಡಿನಲ್ಲಿ ಅನಾರೋಗ್ಯಕ್ಕೆ ಈಡಾಗಿದ್ದರು. ಇದೇ ದುಃಖದಲ್ಲಿ ಹರಿಧರನ್ ನಿನ್ನೆ ತಮಿಳುನಾಡಿಗೆ ಹೋಗಿ ತಂದೆಯನ್ನು ನೋಡಿದ್ದನು. ಆದರೆ ದುರಾದೃಷ್ಟವಶಾತ್ ಹರಿಧರನ್ ತಂದೆ ಸೆಲ್ವಕುಟ್ಟಿ ನೆನ್ನೆ ಸಾವನ್ನಪ್ಪಿದ್ದರು. ಇದೇ ನೋವಿನಲ್ಲಿ ವಿಧ್ಯಾರ್ಥಿ ಹರಿಧರನ್ ಇಂದು ನಡೆಯುತ್ತಿರುವ ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದಾನೆ.
ಇದನ್ನೂ ಓದಿ :ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಮೋಸ; ಬಾತ್ ರೂಂನಲ್ಲಿ ವಿಷ ಸೇವಿಸಿ ಯುವಕ ಆತ್ಮಹ*ತ್ಯೆ
ಹರಿಧರನ್ ಹೊಸಪೇಟೆಯ ಟಿಬಿ ಡ್ಯಾಂನ ಸಂತ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು. ಹೊಸಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದಾನೆ. ತಂದೆಯನ್ನು ಕಳೆದುಕೊಂಡಿರುವ ನೋವಿನಲ್ಲೇ ವಿದ್ಯಾರ್ಥಿ ಪರೀಕ್ಷೆ ಬರೆಯಲು ಹಾಜರಾಗಿದ್ದು. ಶಿಕ್ಷಕರು ವಿದ್ಯಾರ್ಥಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.