ಅನೇಕಲ್ : ಲಾಂಗ್ ಹಿಡಿದು ರೀಲ್ಸ್ ಮಾಡಿ ಜೈಲು ಸೇರಿದ್ದ ಮಾಜಿ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಇಬ್ಬರು ಜಾಮೀನು ಪಡೆದು ಜೈಲಿಂದ ಹೊರ ಬಂದಿದ್ದಾರೆ.
ನಿನ್ನೆ ಸಂಜೆ ವಿನಯ್ ಗೌಡ ಹಾಗೂ ರಜತ್‌ಗೆ 24ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ. ಇಬ್ಬರಿಗೂ ತಲಾ 10,000 ರೂ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿದೆ. ಜಾಮೀನು ಆದೇಶ ಪ್ರತಿ ಇಂದು ಜೈಲಾಧಿಕಾರಿಗಳ ಕೈ ಸೇರಿದ್ದು. ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಜೈಲಿಂದ ಹೊರಬರುತ್ತಿದ್ದಂತೆ ಇಬ್ಬರು ಮಾಧ್ಯಮದೊಂದಿಗೆ ಮಾತನಾಡಲು ನಿರಾಕರಿಸಿದ್ದು. ವಿನಯ್ ಎಲ್ಲರೂ ಸೇರಿ ಒಮ್ಮೆ ಮಾತಾಡೋಣ. ಎಲ್ಲರೂ ತುಂಬ ಸಪೋರ್ಟ್ ಮಾಡಿದ್ದೀರ ಎಂದು ಹೇಳಿದ್ದಾರೆ.