ಬಳ್ಳಾರಿ : ಹಾಲಿನ ದರ ಹೆಚ್ಚಳದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಪ್ರತಿಕ್ರಿಯೆ ನೀಡಿದ್ದು. ಬಿಜೆಪಿಯವರು ರೈತ ವಿರೋಧಿಗಳು, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜೆನೆಯಿಂದ ಬಿಜೆಪಿಯವರಿಗೆ ಭೇದಿ ಹತ್ತಿದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಮಾತನಾಡಿದ ಭೀಮಾ ನಾಯ್ಕ ‘ಬಿಜೆಪಿಯವರಿಗೆ ಮಾಡೋದಕ್ಕೆ ಯಾವುದೇ ಕೆಲಸ ಇಲ್ಲ, ಬರೀ ಟೀಕೆ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಬೊಮ್ಮಾಯಿ ಸಿಎಂ ಇದ್ದಾಗ 700ಕೋಟಿ ಪ್ರೋತ್ಸಾಹ ಧನ ಪೆಂಡಿಂಗ್ ಇಟ್ಟು ಹೋಗಿದ್ರು. ಯಡಿಯೂರಪ್ಪ ಇದ್ದಾಗ 2ರೂ ಪ್ರೋತ್ಸಾಹ ಧನ ನೀಡಿದ್ರು.
ನಮ್ಮ ಸಿಎಂ ಸಿದ್ದರಾಮಯ್ಯ ಸಾಹೇಬ್ರು ಪ್ರೋತ್ಸಾಹ ಧನವನ್ನು 5 ರೂಪಾಯಿಗೆ ಹೆಚ್ಚಳ ಮಾಡಿದರು. ಜೊತೆಗೆ ಹಾಲಿನ ಪುಡಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಕೇವಲ 25ರೂಗೆ ಕೊಡ್ತಿದ್ದೇವೆ. ಇದರ ಬಗ್ಗೆ ತಾಕತ್ತಿದ್ರೆ ಚರ್ಚೆ ಮಾಡೋದಕ್ಕೆ ಬರಲಿ. ಬಿಜೆಪಿಯವರಿಗೆ ಮಾಡೋದಕ್ಕೆ ಕೆಲ್ಸಾ ಇಲ್ಲಾ, ಸುಮ್ನೇ ಗ್ಯಾರಂಟಿ ಬಗ್ಗೆ ಮಾತಾಡ್ತಾರೆ. ನಮ್ಮ ರೈತರಿಗೆ ನಾವು ಹಣ ಕೊಡಬಾರದ ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ :ಬಿಬಿಎಂಪಿ ಲಾರಿಗೆ ಬೈಕ್ ಸವಾರ ಬಲಿ; ಲಾರಿಗೆ ಬೆಂಕಿ ಹಚ್ಚಿದ ಜನ
ಮುಂದುವರಿದು ಮಾತನಾಡಿದ ಭೀಮಾನಾಯ್ಕ ‘ನಾನು ಸ್ಪಷ್ಟವಾಗಿ ಹೇಳತ್ತೇನೆ. ಬಿಜೆಪಿಯವರು ರೈತ ವಿರೋಧಿಗಳು. ಆದ್ದರಿಂದ ಈ ರೀತಿ ಮಾತನಾಡುತ್ತಾರೆ. ಬಿಜೆಪಿಯವರ ಸರ್ಕಾರದಲ್ಲೂ ದರ ಏರಿಕೆ ಮಾಡಿದ್ದಾರೆ. ಬೊಮ್ಮಾಯಿ ಅವರು ದರ ಹೆಚ್ಚಿಸಿದ ಹಣ ಅವರ ಮನೆಗೆ ಹೋಯ್ತಾ..? ಆದರೆ ಈಗ ದರ ಏರಿಕೆ ಮಾಡಿರುವ ಹಣ ನೇರವಾಗಿ ರೈತರಿಗೆ ಹೋಗುತ್ತದೆ. ಬಿಜೆಪಿಯರಿಗೆ ಇದರ ಅರಿವು ಇಲ್ಲಾ. ಸುಮ್ನೇ ವಿರೋಧ ಮಾಡಿಕೊಂಡು ಸಮಯ ಕಳೆಯುತ್ತಿದ್ದಾರೆ.
ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನ ಮುಚ್ಚಿಕೊಳ್ಳದೇ ರೈತರ ವಿಚಾರಕ್ಕೆ ಬರ್ತಾರೆ. ಸರ್ಕಾರಕ್ಕೂ, ಕೆಎಂಎಫ್ಗೂ ಏನ್ ಸಂಬಂಧ. ದರ ಹೆಚ್ಚಳ ಮಾಡಿದ ಹಣ ಸರ್ಕಾರದ ಬೊಕ್ಕಸಕ್ಕೆ ಹೋಗುತ್ತಾ.? ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಪಂಚ ಗ್ಯಾರಂಟಿಗಳಿಂದ ಬಿಜೆಪಿವರಿಗೆ ಭೇದಿ ಹತ್ತಿದೆ ಎಂದು ಭೀಮಾ ನಾಯ್ಕ ಹೇಳಿಕೆ ನೀಡಿದರು.