ಹಾಸನ : ಕ್ರಿಕೆಟ್ ಬೆಟ್ಟಿಂಗ್ಗೆ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಮೃತ ಯುವಕನನ್ನು 40 ವರ್ಷದ ಸ್ವರೂಪ ಎಂದು ಗುರುತಿಸಲಾಗಿದೆ.
ಹಾಸನ ತಾಲ್ಲೂಕಿನ, ಅಟ್ಟಾವರ ಗ್ರಾಮದಲ್ಲಿ ಘಟನೆ ನಡೆದಿದ್ದು. ಕೆಲ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಸ್ವರೂಪ್ ಅಂದಿನಿಂದ ಮನೆಯಲ್ಲೇ ಇದ್ದನು. ಚಿಕಿತ್ಸೆಗೆ ಎಂದು ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಇತ್ತೀಚೆಗೆ ಸಾಲಗಾರರು ಸಾಲ ಹಿಂತಿರುಗಿಸವಂತೆ ಪೀಡಿಸುತ್ತಿದ್ದರು. ಇವೆಲ್ಲದರಿಂದ ಸ್ವರೂಪ ಬೇಸತ್ತಿದ್ದನು.
ಇದನ್ನೂ ಓದಿ :ರೀಲ್ಸ್ ವಿವಾದ; ಜೈಲಿಂದ ಹೊರಬಂದ ರಜತ್-ವಿನಯ್..!
ಜೊತೆಗೆ ಇತ್ತೀಚೆಗೆ ಅಪಘಾತದಿಂದ ಬಂದಿದ್ದ ಹಣವನ್ನು ಸ್ವರೂಪ್ ಕ್ರಿಕೆಟ್ ಬೆಟ್ಟಿಂಗ್ಗೆ ಎಂದು ಅನ್ಸಾರ್, ತಿಪ್ಪೇಸ್ವಾಮಿ, ಬಾಳಪ್ಪ ಎಂಬುವವರಿಗೆ ಹಣ ನೀಡಿದ್ದನು. ಆದರೆ ಹಣ ಪಡೆದ ಮೂವರು ಹಣ ವಾಪಾಸ್ ನೀಡದೆ ಮೋಸ ಮಾಡಿದ್ದರು. ಇವೆಲ್ಲದರಿಂದ ಬೇಸತ್ತ ಸ್ವರೂಪ್ ಬಾತ್ ರೂಂನಲ್ಲ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ದುದ್ದ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.