ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದ್ದು. ರೊಚ್ಚಿಗೆದ್ದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಥಣಿಸಂಧ್ರ ಬಳಿಯ ರೈಲ್ವೇ ಟ್ರ್ಯಾಕ್ ಬಳಿ ಘಟನೆ ನಡೆದಿದ್ದು. ಬೈಕ್ ಸವಾರನಿಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಘಟನೆ ಕಂಡು ಆಕ್ರೋಶಿತರಾದ ಸ್ಥಳೀಯರು ಕಸದ ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಲಾರಿಗೆ ಬೆಂಕಿ ಹಚ್ಚುತ್ತಿದ್ದಂತೆ ಲಾರಿ ಚಾಲಕ ಕೆಳಗೆ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ. ಘಟನೆ ಕುರಿತು ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದು. ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಭೀಕರ ರಸ್ತೆ ಅಪಘಾತ; ಹಬ್ಬಕ್ಕೆ ಮನೆಗೆ ತೆರಳುತ್ತಿದ್ದ ಮೂವರು ಸಾ*ವು..!
ಥಣಿಸಂದ್ರ ಭಾಗದಲ್ಲಿ ಬಿಬಿಎಂಪಿ ಕಸದ ಲಾರಿಗೆ ಇದು ನಾಲ್ಕನೇ ಬಲಿಯಾಗಿದ್ದು. ಕಳೆದ ಮೂರು ತಿಂಗಳ ಹಿಂದೆ ಕಸದ ಲಾರಿ ಹರಿದು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಈಗ ನಡೆದಿರುವ ಘಟನೆಯಲ್ಲಿ ಯಾರದು ತಪ್ಪು ಎಂಬ ಬಗ್ಗೆ ಇನ್ನು ಮಾಹಿತಿ ದೊರೆಯಬೇಕಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.