Monday, March 31, 2025

ಮಯನ್ಮಾರ್​ನಲ್ಲಿ ಭಾರೀ ಭೂಕಂಪ, 7.2ರಷ್ಟು ತೀವ್ರತೆ ದಾಖಲು..!

ಬರ್ಮಾ : ನೆರೆಯ ರಾಷ್ಟ್ರ ಮಯನ್ಮಾರ್​ನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು. ಮಯನ್ಮಾರ್​ ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ 12:50ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ ಭೂಕಂಪನದ ಕೇಂದ್ರಬಿಂದು ಭೂ ಅಕ್ಷಾಂಶ 21.93 ಉತ್ತರ, ಉದ್ದ: 96.07 ಪೂರ್ವದಲ್ಲಿದ್ದು. ಸುಮಾರು 10 ಕಿ.ಮೀ ಆಳದಲ್ಲಿ ಕಂಪನ ಸಂಭವಿಸಿದೆ.

ಬ್ಯಾಂಕಾಕ್​ನಲ್ಲೂ ಭೂಕಂಪನದ ಅನುಭವವಾಗಿದ್ದು. ಜನರು ತಮ್ಮ ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಅಷ್ಟೇ ಅಲ್ಲದೇ ಈಜುಕೊಳದಲ್ಲಿರುವ ನೀರು ಕೂಡ ಹೊರ ಚೆಲ್ಲುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ : ನಿಮ್ಮ ತಾಯಿ-ತಂಗಿಯ ವಿಡಿಯೋ ನೋಡಿ ಖುಷಿಪಡಿ; ತಮಿಳು ನಟಿ ಶೃತಿ ಖಡಕ್​ ಪ್ರತಿಕ್ರಿಯೆ

ಈ ತಿಂಗಳ ಆರಂಭದಲ್ಲಿಯೂ (ಮಾರ್ಚ್​.03), ಮಯ್ಮಾನಾರ್​ನಲ್ಲಿ ಭೂಕಂಪ ಸಂಭವಿಸಿದ್ದು. ರಿಕ್ಟರ್​ ಮಾಪಕದಲ್ಲಿ 4.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು. ಈ ಭೂಕಂಪ ಭೂ ಮೇಲ್ಮೈನಿಂದ ಸುಮಾರು 125 ಕಿಮೀ ಆಳದಲ್ಲಿ ಸಂಭವಿದ್ದು ವರದಿಯಾಗಿತ್ತು. ಆದರೆ ಈ ಬಾರಿ ಸಂಭವಿಸಿರುವ ಭೂಕಂಪ ಭೂಮಿಯಿಂದ ಕೇವಲ 10 ಕಿಮೀ ಆಳದಲ್ಲಿ. ಈ ಭೂಕಂಪವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES