ಹುಬ್ಬಳ್ಳಿ : ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದು. ಇದರ ನಡುವೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಯತ್ನಾಳ್ ನಮ್ಮ ಪಕ್ಷಕ್ಕೆ ಬಂದರೆ ಕರೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಮಾತನಾಡಿದ ಶಾಸಕ ರಾಜುಕಾಗೆ ‘ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷಕ್ಕೆ ಬಂದ್ರೆ ಕರೆದುಕೊಳ್ಳುತ್ತೇವೆ. ಹೈಕಮಾಂಡ್ ಯತ್ನಾಳ್ ಜೊತೆಗೆ ಚರ್ಚೆ ಮಾಡಿ ಕರೆದುಕೊಂಡು ಬನ್ನಿ ಅಂದ್ರೆ ಸ್ವಾಗತ ಮಾಡ್ತೀವಿ. ಸ್ವತಃ ನಾನೇ ಬಸನಗೌಡ ಪಾಟೀಲ್ ಯತ್ನಾಳರನ್ನು ಕಾಂಗ್ರೆಸ್ ಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ : ಪತ್ನಿಯನ್ನು ತುಂಡು-ತುಂಡು ಮಾಡಿದ್ದ ಪತಿ ಪುಣೆಯಲ್ಲಿ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನ
ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗಲ್ಲ..!
ಬೆಲೆ ಏರಿಕೆ ಬಗ್ಗೆ ಮಾತನಾಡಿದ ಶಾಸಕ ರಾಜು ಕಾಗೆ ‘ಬೆಲೆ ಏರಿಕೆಯಿಂದ ಅಷ್ಟೇನೂ ಹೊರೆ ಆಗೋದಿಲ್ಲಾ, ಈ ನಮಗೂ ಇತಿ ಮಿತಿ ಇದೆ. ಹೊಸ ಬಸ್ ನಿಲ್ದಾಣ ನಿರ್ಮಾಣ, ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ
ಸದ್ಯದ ವ್ಯವಸ್ಥೆ ಸರಿಪಡಿಸಬೇಕು. ನೋ ಪ್ರಾಪಿಟ್ , ನೋ ಲಾಸ್ ನಲ್ಲಿ ಸಂಸ್ಥೆ ನಡೆಯಬೇಕು. ಐದು ಗ್ಯಾರಂಟಿಯಿಂದ ಜನರಿಗೆ ಉಪಯೋಗ ಆಗುತ್ತಿದೆ. ನಮ್ಮ ಯೋಜನೆಗಳನ್ನ ಯಾರು ವಿರೋಧ ಮಾಡುತ್ತಿದ್ದರು ಅವರೇ ನಮ್ಮನ್ನ ಕಾಫಿ ಮಾಡುತ್ತಿದ್ದಾರೆ.
ಸರ್ಕಾರದಲ್ಲಿ ಅಡೆತಡೆ ಸಹಜ ಆದರೆ ಸಿದ್ದರಾಮಯ್ಯ ಪಾರದರ್ಶಕವಾಗಿ ಸರ್ಕಾರ ನಡೆಸುತ್ತಿದ್ದಾರೆ. ಹನಿಟ್ರ್ಯಾಪ್ ಅದು ವೈಯಕ್ತಿಕ, ಅದು ಸರ್ಕಾರದ ಯೋಜನೆ ಅಲ್ಲ. ಸದನದಲ್ಲಿ ರಾಜಣ್ಣ ಅವರ ಹೆಸರು ತೆಗೆದುಕೊಂಡಿದ್ದು ಯತ್ನಾಳ್. ಅದಕ್ಕೆ ರಾಜಣ್ಣ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.