Sunday, March 30, 2025

ರಾಜಣ್ಣ ಕುಡುಕನ ರೀತಿ ಅಸಹ್ಯವಾಗಿ ಮಾತನಾಡಿದ್ದಾರೆ..!

ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪ ರಾಜ್ಯದಲ್ಲಿ ನಡೆಯುತ್ತಿರುವ ಹನಿಟ್ರ್ಯಾಪ್​ ಆರೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು. ವಿಧಾನಸೌದವನ್ನು ಕೆಂಗಲ್​ ಹನುಮಂತಯ್ಯ ಕಟ್ಟಿಸಿದಾಗಿನಿಂದಲೂ ಇಷ್ಟು ಕೀಳುಮಟ್ಟದ ಚರ್ಚೆ ನಡೆದಿಲ್ಲ. ತುಂಬ ಕೀಳು ಮಟ್ಟದ ಭಾಷೆ ಬಳಸಿ ರಾಜಣ್ಣ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜಣ್ಣ ಕುಡುಕನ ರೀತಿಯಲ್ಲಿ ಅಸಹ್ಯವಾಗಿ ಮಾತನಾಡಿದ್ದಾರೆ..!

ಸ್ಪೀಕರ್​ ಯು.ಟಿ ಖಾದರ್​ ಬಿಜೆಪಿ 18 ಶಾಸಕರನ್ನು ಸದನದಿಂದ ಹೊರ ಹಾಕಿದ ಕುರಿತು ಮಾತನಾಡಿದ ಈಶ್ವರಪ್ಪ ‘ ಸ್ಪೀಕರ್​ 18 ಶಾಸಕರನ್ನು ಹೊರಗೆ ಹಾಕಿ ಖದರ್​ ತೋರಿಸಿದ್ದಾರೆ. ಆದರೆ ಅದೇ ಖದರ್​ನ್ನು ರಾಜಣ್ಣ ಮಾತನಾಡುವಾಗ ತೋರಿಸಬೇಕಿತ್ತು. ಯಾವನೋ ಕುಡುಕನ ರೀತಿಯಲ್ಲಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಮಾತನಾಡಿದ್ದಾರೆ.ಆಗ ಸ್ಪೀಕರ್ ಅವರು ರಾಜಣ್ಣನಿಗೆ ಹೊರಗೆ ಹಾಕುವ ಖದರ್ ತೋರಿಸಬೇಕಿತ್ತು. ಸಿದ್ದರಾಮಯ್ಯನವರಾದರು ಈ ಕುರಿತು ಮಾತನಾಡದಂತೆ ತಡೆಯಬಹುದಿತ್ತು ಎಂದು ಕೆ.ಎಸ್​ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸ್ಮಾರ್ಟ್​ ಮೀಟರ್​ ಖರೀದಿ ಟೆಂಡರ್​ನಲ್ಲಿ 15,568 ಕೋಟಿ ಮೊತ್ತದ ಹಗರಣ..!

ರಾಜಣ್ಣ ಇಡೀ ರಾಜ್ಯದ ಮಾನವನ್ನು ದೇಶದ ಮುಂದೆ ಹರಾಜು ಹಾಕಿದ್ದಾರೆ. ವಿಧಾನಸೌಧದ ಪಾವಿತ್ರ್ಯತೆಯನ್ನು ರಾಜಣ್ಣ ಹಾಳು ಮಾಡಿದ್ದಾರೆ. ಕೂಡಲೇ ರಾಜಣ್ಣರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ರಾಜಣ್ಣನಂತಹ ಕೀಳುಮಟ್ಟದ ಮಂತ್ರಿಯನ್ನಿಟ್ಟುಕೊಂಡು ರಾಜ್ಯದಲ್ಲಿ ಸರ್ಕಾರ ಇರಬಾರದು. ಕೂಡಲೇ ರಾಜ್ಯಪಾಲರು ಈ ಸರ್ಕಾರವನ್ನು ಕಿತ್ತೊಗೆಯಬೇಕು.

ರಾಜಣ್ಣನ ನೀಚತನದಿಂದ ಟಿವಿ ನೋಡುವುದೆ ತಪ್ಪಾಗಿದೆ

ಸದನದಲ್ಲಿ ಹನಿಟ್ರ್ಯಾಪ್​ ವಿಚಾರ ಪ್ರಸ್ತಾಪದ ಕುರಿತು ಮಾತನಾಡಿದ ಈಶ್ವರಪ್ಪ ‘ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಕಟ್ಟಿಸಿದಾಗಿನಿಂದಲೂ ಇಷ್ಟು ಕೀಳುಮಟ್ಟದ ಚರ್ಚೆ ನಡೆದಿಲ್ಲ. ರಾಜಣ್ಣ ಅತ್ಯಂತ ಕೀಳುಮಟ್ಟದ ಭಾಷೆ ಬಳಸಿದ್ದಾರೆ. ರಾಜಣ್ಣ ಸದನದಲ್ಲಿ ಮಾತನಾಡುವುದನ್ನು ಟಿವಿಯಲ್ಲಿ ನೋಡಿದೆ, ಆಗ ಅಲ್ಲಿಗೆ ಬಂದ ಬಾಲಕನೊಬ್ಬ ಏನಿದು ಹನಿಟ್ರ್ಯಾಪ್ ಎಂದರೆ ಎಂದು ಪ್ರಶ್ನಿಸಿದ. ಮನೆಗಳಲ್ಲಿ, ಕಚೇರಿಗಳಲ್ಲಿ ಟಿವಿ ಹಾಕುವುದೇ ತಪ್ಪಾಗಿದೆ. ರಾಜಣ್ಣನ ನೀಚತನದಿಂದ ಟಿವಿ ನೋಡುವುದೇ ತಪ್ಪಾಗಿದೆ. ಕಾಂಗ್ರೆಸ್​ನವರು ಕೂಡಲೇ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

RELATED ARTICLES

Related Articles

TRENDING ARTICLES