Sunday, March 30, 2025

ಡಿಕೆಶಿ ವಿರುದ್ದ ಆಕ್ರೋಶ, ನಡುರಸ್ತೆಯಲ್ಲಿ ಬಂಡೆಯನ್ನು ಪುಡಿಗೈದ ಮಂಡ್ಯ ಜನತೆ..!

ಮಂಡ್ಯ : ಮಂಡ್ಯದವರು ಛತ್ರಿಗಳು ಎಂದಿದ್ದ ಡಿಕೆಶಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು. ಡಿಕೆಶಿ ವಿರುದ್ದ ಮಂಡ್ಯದ ಜನರು ರೊಚ್ಚಿಗೆದ್ದಿದ್ದಾರೆ. ಜೊತೆಗೆ ರಾಮನಗರದ ಬಂಡೆಯನ್ನು ಪುಡಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು. ರಸ್ತೆಯಲ್ಲಿ ಬಂಡೆಯನ್ನು ಸುತ್ತಿಗೆಯಿಂದ ಪುಡಿ ಮಾಡಿದ್ದಾರೆ.

ಮಂಡ್ಯದ ಜನರು ಛತ್ರಿಗಳು ಎಂಬ ಡಿಕೆಶಿ ಹೇಳಿಕೆಗೆ ರೊಚ್ಚಿಗೆದ್ದಿರುವ ಮಂಡ್ಯದ ಜನರು ಇಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಆವರಣದ ಮುಂಭಾಗ ಪ್ರೊಟೆಸ್ಟ್ ನಡೆಸಿದ್ದು. ಈ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಕೈ ಜೋಡಿಸಿವೆ. ಛತ್ರಿ ಹಿಡಿದು ರಸ್ತೆಯಲ್ಲಿ ಬಂಡೆಯನ್ನು ಇಟ್ಟು ಸುತ್ತಿಗೆಯಿಂದ ಪುಡಿ ಮಾಡಿದ್ದಾರೆ. ಈ ವೇಳೆ ರಾಮನಗರದ ಬಂಡೆಯನ್ನು ಪುಡಿ ಮಾಡುತ್ತೇವೆ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ :ಬಿಡದಿ ರೈಲ್ವೇ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ..!

ಈ ವೇಳೆ ಪ್ರತಿಭಟನಕಾರರು ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಡಿಕೆಶಿ ಈ ರೀತಿ ಮಾತನಾಡಿರುವುದು ತಪ್ಪು. ಇವರ ಮಾತಿನಿಂದ ಮಂಡ್ಯದ ಜನರಿಗೆ ಅಪಮಾನವಾಗಿದೆ. ಈ ಕೂಡಲೇ ಡಿಕೆಶಿ ಮಂಡ್ಯದ ಜನರ ಬಳಿ ಕ್ಷಮೆ ಕೇಳಬೇಕು . ಇಲ್ಲವಾದಲ್ಲಿ ಅವರನ್ನು ಮಂಡ್ಯಕ್ಕೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಜೊತೆಗೆ ವಿಶ್ವೇಶ್ವರಯ್ಯ ಪ್ರತಿಮೆ ಆವರಣದಿಂದ ಸಂಜಯ ವೃತ್ತದವರೆಗೆ ಪ್ರತಿಭಟನೆ ನಡೆಸಿದ್ದು. ಮೈಸೂರು-ಬೆಂಗಳೂರು ಹೆದ್ದಾರಿ ತಡೆದು, ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ.

RELATED ARTICLES

Related Articles

TRENDING ARTICLES