ಬೆಂಗಳೂರು: ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ಎನಿಸಿಕೊಂಡಿರುವ ನಂದಿನಿ ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲೆ ಹೆಸರುವಾಸಿಯಗಿದೆ. ಸದಾ ಒಂದಲ್ಲಾ ಒಂದು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಂದಿನಿ ಕಳೆದ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ನಂದಿನಿ ಇಡ್ಲಿ, ದೋಸೆ ಹಿಟ್ಟಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಬೇಡಿಕೆ ಹೆಚ್ಚಾದ ಹಿನ್ನಲೆಯಲ್ಲಿ ಕೆಎಂಎಫ್ ಈ-ಕಾರ್ಮಸ್ನಲ್ಲಿ ಇಡ್ಲಿ-ದೋಸೆ ಹಿಟ್ಟನ್ನು ಮಾರಾಟ ಮಾಡಲು ಮುಂದಾಗಿದೆ.
ಹೌದು.. ಕಳೆದ ಜನವರಿಯಲ್ಲಿ ಕೆಎಂಎಫ್ ಮಾರುಕಟ್ಟೆಗೆ ನಂದಿನಿ ಬ್ರ್ಯಾಂಡಿನ ಇಡ್ಲಿ, ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಆರಂಭದಿಂದಲೂ ಈ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿದ್ದು. ಇದೀಗ ಉತ್ಪಾದನೆಗಿಂತ, ಬೇಡಿಕೆ ಹೆಚ್ಚಾಗಿದೆ. ಇದರಿಂದ ಉತ್ಪಾದನ ಪ್ರಮಾಣವನ್ನು ಹೆಚ್ಚಿಸಲು ಕ್ರಮ ವಹಿಸಿರುವ ನಂದಿನಿ. ಇಡ್ಲಿ-ದೋಸೆ ಹಿಟ್ಟನ್ನು ಈ-ಕಾರ್ಮಸ್ ಮೂಲಕ ಆನ್ಲೈನ್ನಲ್ಲಿ ಮಾರಾಟ ಮಾಡಲು ಪ್ಲಾನ್ ರೂಪಿಸಿದೆ.
ಇನ್ನು ಮುಂದೆ ಗ್ರಾಹಕರು ಇಡ್ಲಿ-ದೋಸೆ ಹಿಟ್ಟಿಗೆ ಅಂಗಡಿಗೆ ಹೋಗುವ ಬದಲು ಈ-ಕಾರ್ಮಸ್ ವೆಬ್ಸೈಟ್ ಅಥವಾ ಆ್ಯಪ್ಗಳ ಮೂಲಕ ಆರ್ಡರ್ ಮಾಡುವ ಮೂಲಕ ಉತ್ಪನ್ನವನ್ನು ತಮ್ಮ ಮನೆಗೆ ತರಿಸಿಕೊಳ್ಳಬಹುದಾಗಿದೆ. ಒಟ್ಟಾರೆ ಕನ್ನಡದ ನಂದಿನಿ ಬ್ರ್ಯಾಂಡ್ ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆಯುತ್ತಿದ್ದು. ತಿರುಪತಿಯ ತಿಮ್ಮಪ್ಪನ ಸನ್ನಧಿಯಲ್ಲಿ ಲಡ್ಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆಯಾಗುತ್ತಿದೆ.