ಚಿಕ್ಕಬಳ್ಳಾಪುರ : ಪರಸ್ಪರ ಪ್ರೀತಿಸುತ್ತಿದ್ದ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಪ್ರಾಣ ಭೀತಿಯಿಂದ ಪೊಲೀಸ್ ಠಾಣೆಯಲ್ಲಿ ಮದುವೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮದುವೆಯಾದ ಜೋಡಿಯನ್ನು 23 ವರ್ಷದ ಪಸೀಹಾ ಹಾಗೂ 24 ವರ್ಷದ ನಾಗಾರ್ಜುನ ಎಂದು ಗುರುತಿಸಲಾಗಿದೆ.
ಪಸೀಹಾ ಹಾಗೂ ನಾಗಾರ್ಜುನ ಇಬ್ಬರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮೈಲನಹಳ್ಳಿ ನಿವಾಸಿಗಳು. ಇಬ್ಬರು ಕೂಡ ಎದುರು-ಬದುರು ಮನೆಯಲ್ಲಿ ವಾಸವಾಗಿದ್ದರು. ಈಗಿರುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು. ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಯುವತಿಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ :ರಾಜಣ್ಣ ಕುಡುಕನ ರೀತಿ ಅಸಹ್ಯವಾಗಿ ಮಾತನಾಡಿದ್ದಾರೆ..!
ಆದರೆ ಇದಕ್ಕೆಲ್ಲಾ ಕ್ಯಾರೆ ಎನ್ನದ ಫಸೀನಾ, ನಾಗಾರ್ಜುನ್ ಜೊತೆ ನೇರವಾಗಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಮದುವೆಯಾಗಿದ್ದಾರೆ ಎಂದು ತಿಳಿದು ಬಂದಿದೆ.