ರಾಮನಗರ: ಬಿಡದಿ ರೈಲ್ವೇ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ತಿಳಿದು ಬಂದಿದ್ದು. ನಿನ್ನೆ ತಡರಾತ್ರಿ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆ (ಮಾ.23) ತಡರಾತ್ರಿ ಬೆಂಗಳೂರಿನ ರೈಲ್ವೇ ಕಂಟ್ರೋಲ್ ರೂಂಗೆ ಕರೆ ಮಾಡಿರುವ ಅಪರಿಚಿತನೊಬ್ಬ ಬಿಡದಿ ರೈಲ್ವೇ ನಿಲ್ದಾಣಕ್ಕೆ ಬಾಂಬ್ ಇಟ್ಟಿರೋದಾಗಿ ತಿಳಿಸಿದ್ದಾನೆ. ಮಾಹಿತಿ ಮೇರೆಗೆ ಎಚ್ಚೆತ್ತ ರೈಲ್ವೇ ಪೊಲೀಸರು ಬೆಳಿಗ್ಗೆಯೇ ಬಿಡದಿ ರೈಲ್ವೇ ನಿಲ್ದಾಣಕ್ಕೆ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಜೊತೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನು ಓದಿ :ಕನ್ನಡ ಹೋರಾಟಗಾರರನ್ನು ‘ನಾಲಾಯಕ್’ ಎಂದಿದ್ದ MES ಮುಖಂಡ ಜೈಲುಪಾಲು..!
ರೈಲ್ವೇ ಅಧಿಕಾರಿಗಳು ಮತ್ತು ರಾಮನಗರ ಡಿವೈಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದು. ಬಾಂಬ್ ಡಿಟೆಕ್ಟರ್ ಮೂಲಕ ಬಿಡದಿ ರೈಲ್ವೆ ನಿಲ್ದಾಣವನ್ನ ಇಂಚಿಂಚೂ ಪರಿಶೀಲನೆ ನಡೆಸಲಾಗಿದೆ . ಜೊತೆಗೆ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಮೇಲೂ ನಿಗಾವಹಿಸಿದ್ದು. ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.