ಬೆಳಗಾವಿ : ಮರಾಠಿ ಪುಂಡರಿಂದ ಹಲ್ಲೆಗೊಳಗಾಗಿದ್ದ ಬಸ್ ಕಂಡೆಕ್ಟರ್ ಮಹದೇವಪ್ಪನನ್ನು ಭೇಟಿ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಯಣ ಗೌಡ ಮರಾಠಿ ಪುಂಡರ ವಿರುದ್ದ ಆಕ್ರೋಶ ಹೊರಹಾಕಿದ್ದು. ನಾವು ಮನಸ್ಸು ಮಾಡಿದರೆ ಬೆಳಗಾವಿಯಲ್ಲಿ ಮರಾಠಿಗರು ಇದ್ದರು ಎಂಬುದಕ್ಕೆ ಕುರುಹು ಇಲ್ಲದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು.. ಬಸ್ನಲ್ಲಿ ಕನ್ನಡ ಮಾತಾಡುವ ವಿಷಯಕ್ಕೆ ಆರಂಭವಾದ ವಿವಾದ ಇಂದು ದೊಡ್ಡ ಸ್ವರೂಪ ಪಡೆದುಕೊಂಡಿದ್ದು. ಇಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಸ್ ಕಂಡೆಕ್ಟರ್ ಮಹಾದೇವಪ್ಪರನ್ನು ಭೇಟಿ ಮಾಡಿದ ನಾರಯಣ ಗೌಡ ಮಾಧ್ಯಮದೊಂದಿಗೆ ಮಾತನಾಡಿದ ಅವರು ‘ಅವರಿಗೆ ಎದೆ ನೋವು ಇದೆ, ಕಂಡಕ್ಟರ್ ಮೇಲೆ ಹಲ್ಲೆಯಾಗಿದೆ. ನೋವು ಕಮ್ಮಿಯಾಗಿಲ್ಲ ಅಂತಾ ಕಣ್ಣೀರು ಹಾಕಿದ್ರೂ. ಕನ್ನಡ ಮಾತನಾಡಿದರು ಎಂದು ಹೊಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ನಡೆಸಬೇಕು.
ಇದನ್ನೂ ಓದಿ :ಬೆಳಗಾವಿ: ಕಂಡೆಕ್ಟರ್ ಮೇಲಿನ ಪೋಕ್ಸೋ ಕೇಸ್ ಹಿಂಪಡೆದ ಅಪ್ರಾಪ್ತೆ ಕುಟುಂಬಸ್ಥರು
ಘಟನೆ ಕುರಿತು ನೆನಪಿಸಿಕೊಂಡರೆ ನಮ್ಮ ರಕ್ತ ಕುದಿಯುತ್ತಿದೆ. ಅವರು ನಮ್ಮ ಕೈಗೆ ಸಿಕ್ಕರೆ ಅವರ ಅಪ್ಪನ ರೀತಿಯಲ್ಲಿ ಮಾಡುತ್ತೇವೆ. ಒಂದು ವೇಳೆ ನಾವು ಕಾನೂನು ಕೈಗೆತ್ತಿಕೊಂಡರೆ ಬೆಳಗಾವಿಯಲ್ಲಿ ಮರಾಠಿ ಇತ್ತು ಎಂಬುದಕ್ಕೆ ಕುರುಹು ಇಲ್ಲದಂತೆ ಮಾಡುತ್ತೇವೆ. ಈ ಗೂಂಡಾಗಳನ್ನು ಕೂಡಲೇ ಗಡಿಪಾರು ಮಾಡಬೇಕು. ಕಂಡೆಕ್ಟರ್ಗೆ ಇಲ್ಲಿ ಚಿಕಿತ್ಸೆ ಸರಿಯಾಗಿ ದೊರೆಯದಿದ್ದರೆ. ನಾವು ಅವರನ್ನು ಬೆಂಗಳೂರಿಗೆ ಕರೆದೊಯ್ದು ಸ್ವಂತ ಹಣದಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದರು.
ಮಹರಾಷ್ಟ್ರದಲ್ಲಿ ಕನ್ನಡಿಗ ಬಸ್ ಚಾಲಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ ನಾರಯಣ ಗೌಡ ‘ ಮಹರಾಷ್ಟ್ರ ಶಿವಸೇನೆಗೂ, ಪಾಕಿಸ್ತಾನದ ಗೂಂಡಾಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಪೋಕ್ಸೋ ಕೇಸ್ ದಾಖಲಿಸಿದ ಇನ್ಸ್ಪೆಕ್ಟರ್ನನ್ನು ಕೂಡಲೇ ಸಂಸ್ಪೆಡ್ ಮಾಡಬೇಕು. ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.