Friday, March 28, 2025

ದರ್ಶನ್​ ವಿರುದ್ದ ಸಾಕ್ಷಿ ಹೇಳುವಂತೆ ಒತ್ತಡ ಹೇರುತ್ತಿದ್ದಾರೆ: ದರ್ಶನ್​ ಪರ ವಕೀಲ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಏಪ್ರಿಲ್​ 8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ದರ್ಶನ್​ ಪರ ವಕೀಲ ವಾದ ಮಂಡನೆ ಮಾಡಿದ್ದು. ದರ್ಶನ್​ ವಿರುದ್ದ ಸಾಕ್ಷಿ ಹೇಳುವಂತೆ ಇತರ ಆರೋಪಿಗಳಿಗ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್​ ಮತ್ತು ಇತರ ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಏಪ್ರೀಲ್​ 8ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಪೊಲೀಸರು ವಕೀಲರ ಹೆಸರಲ್ಲಿ ಆರೋಪಿಗಳನ್ನು ಭೇಟಿಯಾಗಿ ಅಪ್ರೂವಲ್​ ಆಗುವಂತೆ ಒತ್ತಡ ಹೇರಿದ್ದಾರೆ ಎಂದು ವಕೀಲ ಸುನೀಲ್​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಬೆಳಗಾವಿಯಲ್ಲಿ ಮರಾಠಿ ಇತ್ತು ಎಂಬ ಕುರುಹು ಇಲ್ಲದಂತೆ ಮಾಡುತ್ತೇವೆ: ಕರವೇ ನಾರಯಣ ಗೌಡ

ಈ ಕುರಿತು ದರ್ಶನ್ ಪರ ವಕೀಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು. ‘ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಉಳಿದ ಆರೋಪಿಗಳಿಗೆ ಒತ್ತಡ ಏರುತ್ತಿದ್ದಾರೆ. ಅಪ್ರೂವಲ್​ ಆಗಿ ಎಂದು ಪದೇ ಪದೇ ನಮ್ಮ ಕಕ್ಷಿದಾರರಿಗೆ ಒತ್ತಡ ಇದೆ. ಪೊಲೀಸರು ವಕೀಲರ ಹೆಸರಲ್ಲಿ ಕೆಲ ಆರೋಪಿಗಳನ್ನು ಭೇಟಿಯಾಗಿ ಈ ರೀತಿ ಮಾಡುತ್ತಿದ್ದಾರೆ. ಈ ವಿಷಯದ ಕುರಿತು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಈ ಕುರಿತು ಅರ್ಜಿ ಸಲ್ಲಿಸುವಂತೆ ಜಡ್ಜ್​ ಸೂಚನೆ ನೀಡಿದ್ದಾರೆ ಎಂದು ದರ್ಶನ್ ಪರ ವಕೀಲ ಸುನೀಲ್​ ಮಾಧ್ಯಮಕ್ಕೆ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES