ನಾವು ನಿಮಗೆ ಕೇವಲ 10 ನಿಮಿಷದಲ್ಲಿ ಟಿವಿ ಡಿಲೆವರಿ ಮಾಡಲು ಸಾಧ್ಯವಿಲ್ಲ ಎಂಬ ಪೋಸ್ಟ್ ಹಾಕಿ ಪಾಕಿಗಳ ಕಾಲೆಳೆದಿದ್ದಾರೆ.
ಹೌದು.. ಭಾರತ ಮತ್ತು ಪಾಕ್ ನಡುವಿನ ಪಂದ್ಯವೆಂದರೆ ಯುದ್ದದ ರೀತಿ. ಎರಡು ದೇಶಗಳ ಅಭಿಮಾನಿಗಳು ತಮ್ಮ ತಂಡಗಳ ಗೆಲುವಿಗಾಗಿ ಪ್ರಾರ್ಥಿಸಿಕೊಂಡು ಪಂದ್ಯ ವೀಕ್ಷಿಸುತ್ತಾರೆ. ಪಂದ್ಯದಲ್ಲಿ ಪಾಕ್ ಸೋತಾಗ ಪಾಕಿಗಳು ತಮ್ಮ ಟಿವಿಗಳನ್ನು ಒಡೆದಾಕಿರುವುದನ್ನು ನಾವು ಕಂಡಿದ್ದೇವೆ. ಸೋಲಿನಾ ನಿರಾಸೆಯಲ್ಲಿ ಈ ರೀತಿಯಾಗಿ ಮಾಡುತ್ತಾರೆ. ಇದನ್ನೆ ತನ್ನ ಮೀಮ್ಗೆ ಉಪಯೋಗಿಸಿಕೊಂಡಿರುವ ಬ್ಲಿಂಕ್ಇಟ್ ’10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೆ ನಮ್ಮಿಂದ ಸಾಧ್ಯವಿಲ್ಲ’ ಎಂದು ಬ್ಲಿಂಕಿಟ್ ತಮಾಷೆ ಮಾಡಿದ್ದು, ಈ ಮೀಮ್ಸ್ ಇದೀಗ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ :ತೇಜಸ್ ಯುದ್ದವಿಮಾನ ಪೂರೈಕೆಯಲ್ಲಿ ವಿಳಂಬ: ತನಿಖೆಗೆ ಆದೇಶಿಸಿದ ರಕ್ಷಣಾ ಇಲಾಖೆ
ಬ್ಲಿಂಕಟ್ ಈ ಪೋಸ್ಟ್ನಲ್ಲಿ ಎಕ್ಷ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ ಪಾಕ್ನ ಕಾಲೆಳೆದಿದ್ದು. ಭಾರತದ ಗೆಲುವನ್ನು ಸಂಭ್ರಮಿಸಿದೆ. ಬ್ಲಿಂಕಿಟ್‌ನ ಈ ಫನ್ನಿ ಮೀಮ್ಸ್ ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಇನ್ನೂ ದೆಹಲಿ ಪೊಲೀಸ್ ಕೂಡಾ ನಮ್ದು ಒಂದು ಇರ್ಲಿ ಎನ್ನುತ್ತಾ ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ. ಹೌದು “ಪಕ್ಕದ ದೇಶದಿಂದ ಕೆಲವು ವಿಚಿತ್ರವಾದ ಶಬ್ದಗಳು ಕೇಳಿ ಬರುತ್ತಿವೆ. ಅದು ಕೇವಲ ಟಿವಿಗಳು ಮಾತ್ರ ಒಡೆದು ಹೋಗಿದ್ದು ಎಂದು ನಾವು ಭಾವಿಸುತ್ತೇವೆ” ಎಂದು ಹೇಳುವ ಮೂಲಕ ಪಾಕ್ ಅಭಿಮಾನಿಗಳ ಕಾಲೆಳೆದಿದ್ದಾರೆ.