ಬೆಳಗಾವಿ : ಕನ್ನಡ ಮಾತನಾಡಿದ್ದಕ್ಕೆ ಕನ್ನಡ ರಕ್ಷಣ ವೇದಿಕೆ ಉಪಾಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಕನ್ನಡ ರಕ್ಷಣೆ ವೇದಿಕೆಯ ತಾಲೂಕು ಉಪಾಧ್ಯಕ್ಷ ಜಯವಂತ್ ನಿಡಗಲ್ಕರ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಕಳೆದೆರಡು ದಿನಗಳ ಹಿಂದೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಂಡೆಕ್ಟರ್ ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ರೊಚ್ಚಿಗೆದ್ದ ಮರಾಠಿ ಯುವಕ ಸ್ನೇಹಿತರನ್ನು ಕರೆಸಿ ಹಲ್ಲೆ ನಡೆಸಿದ್ದನು. ಈ ಘಟನೆ ಮಾಸುವ ಮುನ್ನವೆ ಗಡಿ ಜಿಲ್ಲೆಯಲ್ಲಿ ಮತ್ತೊಂದು ಅಘಾತಕಾರಿ ಕೃತ್ಯ ನಡೆದಿದ್ದು. ಕನ್ನಡದಲ್ಲಿ ಮಾತನಾಡುತ್ತಿದ್ದ ಕನ್ನಡ ರಕ್ಷಣಾ ವೇದಿಕೆ ಉಪಾಧ್ಯಕ್ಷನ ಮೇಲೆ ಯುವಕರ ಗುಂಪೊಂದು ಮಾರಾಣಾಂತಿಕ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ :ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜ್ಯೋಗತಿ ಮಂಜಮ್ಮನ ಮನೆಗೆ ಭೇಟಿ ನೀಡಿದ ಮೇಘಾಲಯ ರಾಜ್ಯಪಾಲರು
ಬೆಳಗಾವಿ ಜಿಲ್ಲೆಯ, ಖಾನಾಪುರ ಪಟ್ಟಣದ ಜಾಂಬೋಟಿ ಕ್ರಾಸ್ ಬಳಿ ಘಟನೆ ನಡೆದಿದ್ದು. ಕನ್ನಡ ಮಾತನಾಡಿದ್ದಕ್ಕೆ ನಾಲ್ವರು ಯುವಕರ ಗುಂಪು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಯಿಂದ ಗಾಯಗೊಂಡ ಜಯವಂತ್ ನಿಡಗಲ್ಕರ್ಗೆ ರಕ್ತಸ್ರಾವವಾಗಿದ್ದು. ಘಟನೆ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರೆಬೇಕಿದೆ.