Monday, February 24, 2025

‘ಭಾರತ ಸೋಲುತ್ತೆ’ ಎಂದು ಬುರುಡೆ ಬಿಟ್ಟಿದ್ದ ಐಐಟಿ ಬಾಬನ ಭವಿಷ್ಯ ಸುಳ್ಳು

ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಸಂಭ್ರಮದ ಬೆನ್ನಲ್ಲೇ ಕುಂಭಮೇಳದ ಐಐಟಿ ಬಾಬಾನ ಭವಿಷ್ಯ ಟ್ರೋಲ್​ ಆಗುತ್ತಿದೆ.

ಹೌದು..  ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ಹೈವೋಲ್ಟೇಜ್ ಕದನ ನಡೆಯುವುದಕ್ಕೆ ಕೆಲವು ದಿನಗಳ ಮುನ್ನ ಐಐಟಿ ಬಾಬಾ ಖಾಸಗಿ ಯುಟ್ಯೂಬ್​ ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ಈ ಉಭಯ ತಂಡಗಳ ನಡುವಿನ ಕದನದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಏನಾಗಿತ್ತು ಅಂದರೆ, ‘ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲನ್ನು ಎದುರಿಸಲಿದೆ ಎಂದು ಅವರು ಹೇಳಿದ್ದರು. ಇದಲ್ಲದೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

ಇದನ್ನೂ ಓದಿ :ಪೋಕ್ಸೋ ಕೇಸ್​ ದಾಖಲಿಸಿದ ಪೊಲೀಸರು ಕಾಮನ್​ ಸೆನ್ಸ್​ ಉಪಯೋಗಿಸಬೇಕಿತ್ತು: ರಾಮಲಿಂಗ ರೆಡ್ಡಿ

ಆದರೆ ಈ ಪಂದ್ಯದಲ್ಲಿ ಭಾರತ ಗೆಲ್ಲುವ ಮೂಲಕ ಪಾಕಿಸ್ತಾನವನ್ನು ಹೊರಗೆ ಕಳುಹಿಸಿದೆ. ಜೊತೆಗೆ ಕಳೆದ ಕೆಲ ಪಂದ್ಯಗಳಿಂದ ಕಳಪೆ ಫಾರ್ಮನಲ್ಲಿದ್ದ ಕಿಂಗ್​ ಕೊಹ್ಲಿ ಶತಕ ಬಾರಿಸುವ ಮೂಲಕ ಫಾರ್ಮಗೆ ಮರಳಿದ್ದಾರೆ. ಪಂದ್ಯದ ಹೊರ ಬೀಳುತ್ತಿದ್ದಂತೆ ಐಐಟಿ ಬಾಬಾರನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES