Monday, February 24, 2025

ಟ್ರೋಲ್​ ಆಗುತ್ತಿದ್ದಂತೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಐಐಟಿ ಬಾಬಾ

ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ಬೆನ್ನಲ್ಲೆ ಐಐಟಿ ಬಾಬಾ ಎಂದೆ ಖ್ಯಾತರಾಗಿರುವ ಏರೋಸ್ಪೇಸ್ ಎಂಜಿನಿಯರ್ ಅಭಯ್ ಸಿಂಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್​ ಟ್ರೋಲ್​ ಆಗಿದ್ದಾರೆ.

ಯೂಟ್ಯೂಬರ್​ ಒಬ್ಬರ ಸಂದರ್ಶನದಲ್ಲಿ ಮಾತನಾಡಿದ್ದ ಬಾಬಾ ಈ ಭಾರಿ ಪಾಕ್​ ವಿರುದ್ದ ಭಾರತ ಗೆಲ್ಲುವುದಿಲ್ಲ. ಜೊತೆಗೆ ವಿರಾಟ್​ ಕೂಡ ಹೆಚ್ಚು ರನ್​ ಬಾರಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ ಭಾರತ ಪಾಕ್​ ಮೇಲೆ ಗೆಲ್ಲುವ ಮೂಲಕ ಬಾಬನ ಭವಿಷ್ಯವನ್ನು ತಲೆಕೆಳಗೆ ಮಾಡಿದೆ. ಭಾರತ ಪಂದ್ಯದಲ್ಲಿ ಗೆಲ್ಲುತ್ತಿದ್ದಂತೆ ಬಾಬನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿದ್ದು. ಇದರ ಬೆನ್ನಲ್ಲೆ ಐಐಟಿ ಬಾಬ ತಾವೂ ಹೇಳಿದ್ದ ಭವಿಷ್ಯದ ಬಗ್ಗೆ ಟ್ವಿಟ್​ ಮಾಡಿ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: ‘ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ’ ಪ್ರತಿಭಟನೆ ಸಭೆಯಲ್ಲಿ ಕಣ್ಣೀರಾಕಿದ ಗವಿಶ್ರೀ !

ಈ ಕುರಿತು ತಮ್ಮ ಎಕ್ಷ್​ ಖಾತೆಯಲ್ಲಿ ಪೋಸ್ಟ್​ ಹಾಕಿರುವ ಬಾಬಾ ‘ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಈ ಗೆಲುವನ್ನು ಎಲ್ಲರೂ ಆಚರಿಸುವಂತೆ ಕೇಳಿಕೊಳ್ಳುತ್ತೇನೆ. ಜೊತೆಗೆ ಭಾರತ ಪಂದ್ಯದಲ್ಲಿ ಗೆಲ್ಲುತ್ತದೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಈ ಪೋಸ್ಟ್​ ಕೆಲವೆ ನಿಮಿಷಗಳಲ್ಲಿ ಸಾಕಷ್ಟು ವ್ಯೂವ್ಸ್​ಗಳನ್ನು ಪಡೆದುಕೊಂಡಿದೆ.

 

RELATED ARTICLES

Related Articles

TRENDING ARTICLES