Monday, February 24, 2025

‘ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ’ ಪ್ರತಿಭಟನೆ ಸಭೆಯಲ್ಲಿ ಕಣ್ಣೀರಾಕಿದ ಗವಿಶ್ರೀ !

ಕೊಪ್ಪಳ : BSPL ಮತ್ತು MSPL ಕಾರ್ಖಾನೆ ವಿರೋಧಿಸಿ ಇಂದು ಕೊಪ್ಪಳ ಬಂದ್​ಗೆ ಕರೆ ನೀಡಿದ್ದು. ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜನರು ಕಾರ್ಖಾನೆಗಳಿಂದ ಅನುಭವಿಸುತ್ತಿರುವ ವಿಡಿಯೋ ನೋಡಿ ಭಾವುಕರಾಗಿದ್ದಾರೆ.

ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ ಎನ್ನುವ ಜಾಗೃತಿ ಜಾಥಾದೊಂದಿಗೆ ಕೊಪ್ಪಳ ಬಂದ್​ಗೆ ಕರೆ ನೀಡಲಾಗಿದ್ದು. ಬಂದ್​ ಹಿನ್ನಲೆ ಕೊಪ್ಪಳ ತಾಲೂಕಿನ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಪ್ಪಳದ ಪ್ರಮುಖರ ರಸ್ತೆಗಳಲ್ಲಿ ಕಾರ್ಖಾನೆ ವಿರುದ್ಧ ಜಾಗೃತಿ ಜಾಥಾ ನಡೆದಿದ್ದು. ಆಟೋ-ಖಾಸಗಿ ವಾಹನಗಳು ಸಹ ಕೊಪ್ಪಳ ಬಂದ್​ಗೆ ಬೆಂಬಲ ನೀಡಿವೆ.

ಇದನ್ನೂ ಓದಿ :ಕ್ಷಮಿಸಿ ಪಾಕ್‌ ಅಭಿಮಾನಿಗಳೇ, 10 ನಿಮಿಷದಲ್ಲಿ ಟಿವಿ ಡೆಲಿವರಿ ಮಾಡೋಕೇ ಆಗಲ್ಲ: ಪಾಕ್​ನ ಟ್ರೋಲ್​ ಮಾಡಿದ ಬ್ಲಿಂಕ್​ಇಟ್​

ಜಾಗೃತಿ ಜಾಥದ ನಂತರ ಕೊಪ್ಪಳದ ತಾಲೂಕಿನ ಕ್ರೀಡಾಂಗಣದಲ್ಲಿ ಬಹಿರಂಗ ಪ್ರತಿಭಟನೆ ಸಭೆ ನಡೆಯುತ್ತಿದ್ದು. ಈ ಸಭೆಯಲ್ಲಿ ಸಾವಿರಾರು ಪ್ರತಿಭಟನೆಕಾರರು ಆಗಮಿಸಿದ್ದಾರೆ. ಈ ಪ್ರತಿಭಟನೆ ಸಭೆಯಲ್ಲಿ ಭಾಗವಹಿಸಿರುವ ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳು, ಕಾರ್ಖಾನೆಗಳಿಂದ ಗ್ರಾಮೀಣ ಭಾಗದ ಜನರು ನರಾಳಾಡುತ್ತಿರೋ ವಿಡಿಯೋ ಬಿಡುಗಡೆ ಮಾಡಿದರು. ಈ ವಿಡಿಯೋವನ್ನು ನೋಡಿದ ಶ್ರೀಗಳು ಕೆಲ ಕಾಲ ಭಾವುಕರಾಗಿ. ಕಣ್ಣೀರು ಹಾಕಿದರು. ಈ ವಿಡಿಯೋ ನೋಡಿದ ಸಾವಿರಾರು ಜನರು ಕೂಡ ಭಾವುಕರಾದರು.

RELATED ARTICLES

Related Articles

TRENDING ARTICLES