Monday, February 24, 2025

ರಾಜ್ಯದ ಇತಿಹಾಸದಲ್ಲಿ ‌ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜನೆ: ಯು.ಟಿ ಖಾದರ್​

ಬೆಂಗಳೂರು : ರಾಜ್ಯದ ಇತಿಹಾಸದಲ್ಲಿ ‌ಮೊದಲ ಬಾರಿಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ ಆಯೋಜಿಸಲಾಗುತ್ತಿದೆ ಎಂದು ಸಚಿವ ಯು.ಟಿ ಖಾದರ್​ ಮಾಹಿತಿ ನೀಡಿದ್ದು. ಇದೇ ಫೆ.27ರಿಂದ ಮಾರ್ಚ್ 3ರವರೆಗೆ ಪುಸ್ತಕ ಮೇಳ ನಡೆಯಲಿದೆ.

ಹೌದು..ಈ ಕುರಿತು ಸ್ಪೀಕರ್​ ಯು.ಟಿ ಖಾದರ್​ ಮಾಹಿತಿ ನೀಡಿದ್ದು. ‘ವಿಧಾನ ಸೌದದಲ್ಲಿ ನಡೆಯುವ ಪುಸ್ತಕ ಮೇಳಕ್ಕೆ ಸರ್ವರಿಗೂ ಅವಕಾಶವಿದೆ. ಸಾಹಿತಿಗಳು ಮತ್ತು ಪ್ರಕಾಶಕರಿಗೆ ಪುಸ್ತಕ ಮಳಿಗೆ ಹಾಕಲು ಅವಕಾಶ ಮಾಡಿಕೊಡುತ್ತೇವೆ. ಜೊತೆಗೆ ರಾಜ್ಯದ ವಿದ್ವಾಂಸರು ಮತ್ತು ಬುದ್ದಿಜೀವಿಗಳ ಸಂವಾದವನ್ನು ಏರ್ಪಡಿಸಲಾಗಿದೆ.

ಇದೇ 27ರ  ಸಂಜೆ 5 ಗಂಟೆಗೆ ಸಿಎಂ ಪುಸ್ತಕ ಮೇಳವನ್ನು ಉದ್ಘಾಟನೆ ನಡೆಸುತ್ತಾರೆ.  ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ್, ದಾಮೋದರ ಮೌಜು ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 2ರ ಸಂಜೆ ಸಾಧುಕೋಕಿಲ ಸಂಗೀತ ಕಾರ್ಯಕ್ರಮ ಇದೆ. ಹಾಗೇ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ ಇರಲಿದೆ.

ಇದನ್ನೂ ಓದಿ :ಟಿಟಿ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ವೈದ್ಯ ಸಾ*ವು

ಯಾರೆಲ್ಲ ಪುಸ್ತಕ ಬಿಡುಗಡೆ ಮಾಡ್ತಾರೋ ಅವರಿಗೆ ಸ್ಟಾಲ್ ಹಾಕಲು ಅವಕಾಶ ಇದೆ. ಎಲ್ಲಾ ಅಕಾಡೆಮಿಗೆ ಒಂದೊಂದು ಸ್ಟಾಲ್​ಗೆ ಹಾಕಲು ಅವಕಾಶ ನೀಡಲಾಗಿದೆ. ಭಾಷಾ ಆಧಾರದಲ್ಲಿ ಸ್ಟಾಲ್‌ ಇಡಲು ಅವಕಾಶ ಕೊಡಲಾಗುತ್ತದೆ. ಫೆಬ್ರವರಿ 28 ರಿಂದ ಮಾರ್ಚ್​ 3ರವರೆಗೆ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿರಲಿದೆ.

ಪ್ರತಿದಿನ 4 ಸಂವಾದಗಳನ್ನು ಏರ್ಪಡಿಸಲಾಗಿದೆ. ಪತ್ರಿಕೋದ್ಯಮ, ಸಾಹಿತ್ಯ, ಕೃತಕ ಬುದ್ದಿಮತ್ತೆ, ಓದು ಮುಂತಾದ ವಿಷಯದ ಬಗ್ಗೆ ಸಂವಾದ ಇರಲಿದೆ. ವಿದ್ಯಾರ್ಥಿಗಳಿಗೆ ಅಸೆಂಬ್ಲಿ ಹಾಲ್ ನೋಡಲು ಅವಕಾಶ ಮಾಡಿ ಕೊಡಲಾಗುತ್ತದೆ. ಶಾಸಕರಿಗೆ ಎರಡು ಲಕ್ಷ ರೂ ಪುಸ್ತಕ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಅದನ್ನು ಅವರ ಕ್ಷೇತ್ರದ ಲೈಬ್ರರಿಗೆ ಕೊಡಬಹುದು. ಹೊರಗೆ ಖರೀದಿ ಮಾಡೋಕ್ಕಿಂತ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯಲಿದೆ. ಸಮಾರೋಪ ಸಮಾರಂಭಕ್ಕೆ ರಾಜ್ಯಪಾಲರು ಆಗಮಿಸುತ್ತಾರೆ ಎಂದು ಸ್ಪೀಕರ್​ ಖಾದರ್​ ಮಾಹಿತಿ ನೀಡಿದರು.

RELATED ARTICLES

Related Articles

TRENDING ARTICLES