ದೇವನಹಳ್ಳಿ : ನಾಮಕರಣಕ್ಕೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ ಮೂರು ಜನರಿಗೆ ಗಂಭೀರ ಗಾಯವಾಗಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತುಮಕೂರಿನ ಶಿರಾದಿಂದ 25 ಜನರನ್ನು ಕರೆ ತರುತ್ತಿದ್ದ ಮಿನಿ ಬಸ್ ಯಲಹಂಕದಲ್ಲಿ ನಡೆಯುತ್ತಿದ್ದ ನಾಮಕರಣ ಕಾರ್ಯಕ್ರಮಕ್ಕೆ ಬರುತ್ತಿತ್ತು. ಆದರೆ ಅದೇನಾಯಿತೋ ಏನೋ ದೊಡ್ಡಬಳ್ಳಾಪುರದ ಮೇಷ್ಟ್ರು ಮನೆ ಗೇಟ್ ಬಳಿ ಬಸ್ ಪಲ್ಟಿಯಾಗಿದ್ದು. ಮೂರು ಜನರಿಗೆ ಗಂಭೀರ ಗಾಯವಾಗಿದೆ. ಬಸ್ ಪಲ್ಟಿಯಾದ ಹಿನ್ನಲೆ ಬಸ್ನ ಗಾಜುಗಳು ಪುಡಿಪುಡಿಯಾಗಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು. ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಇದನ್ನೂ ಓದಿ :ಸಚಿವ ಸ್ಥಾನ ಬೇಡ ಎಂದ ಪರಂಗೆ ಸಿಎಂ ಆಗಿ ಎಂದು ಹುರಿದುಂಬಿಸಿದ ‘ಕೈ’ ಕಾರ್ಯಕರ್ತರು
ಗಾಯಾಳುಗಳನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ರಸ್ತೆಯಲ್ಲಿದ್ದ ಗಾಜಿನ ಪೀಸ್ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.