ಮುಂಬೈ : ಅತ್ತೆ-ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಕೆಲವೊಮ್ಮೆ ಈ ಜಗಳಗಳು ಕುಟುಂಬವನ್ನು ಎರಡು ಮನೆಯಾಗಿ ವಿಭಜಿಸಿ ಬಿಡುತ್ತವೆ. ಆದರೆ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು. ಮುಂಬೈನ್ ನಾಸಿಕ್ ನ್ಯಾಯಲಯಕ್ಕೆ ಬಂದಿದ್ದ ಅತ್ತೆ ಸೊಸೆ ಕೋರ್ಟ್ ಆವರಣದಲ್ಲೆ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಇವರ ಈ ಜಗಳಕ್ಕೆ ಅಲ್ಲಿ ನೆರೆದಿದ್ದ ಇವರ ಕುಟುಂಬಸ್ಥರು ಸಾಥ್ ನೀಡಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದಿದ್ದು, ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಜಗಳವಾಡಿದ್ದಾರೆ. ಮೊದಲಿಗೆ ಇಬ್ಬರ ನಡುವೆ ವಾಗ್ವಾದ ಶುರುವಾಗಿದ್ದು. ಮಾತು ತಾರಕಕ್ಕೇರಿ ಇಬ್ಬರು ಕೈ ಮಿಲಾಯಿಸಿಕೊಂಡಿದ್ದಾರೆ. ಇದೇ ವೇಳೆ ಅಲ್ಲೇ ಇದ್ದ ಎರಡು ಕುಟುಂಬಸ್ಥರು ಸಿಕ್ಕಿದ್ದೇ ಚಾನ್ಸ್ ಎಂಬಂತೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಲ್ಲಿದ್ದ ಜನರು ಈ ಜಗಳವನ್ನು ಬಿಡಿಸಲು ಯತ್ನಿಸಿದರು ಕೂಡ ಸಾಧ್ಯವಾಗದೆ ಕೊನೆಯಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ.
Kalesh b/w Mother-in-Law and Daughter-in-Law Outside Court, Nashik MH
pic.twitter.com/QAjcpr6sYu— Ghar Ke Kalesh (@gharkekalesh) February 21, 2025
ಇದನ್ನೂ ಓದಿ :ಭಗವದ್ಗೀತೆ ಮೇಲೆ ಕೈಯಿಟ್ಟು FBI ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾಶ್ ಪಟೇಲ್
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಲಕ್ಷಾಂತರ ಜನರು ವೀಕ್ಷಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.