Saturday, February 22, 2025

‘ಕನ್ನಡ ಮಾತಾಡಿ’ ಎಂದ ಕಂಡೆಕ್ಟರ್​ ಮೇಲೆ ಪೋಕ್ಸೋ​ ಕೇಸ್​ ದಾಖಲಿಸಿದ ಪೊಲೀಸರು

ಬೆಳಗಾವಿ : ಕನ್ನಡ ಮಾತನಾಡು ಅಂದಿದ್ದಕ್ಕೆ ಬಸ್​ ಕಂಡೆಕ್ಟರ್  ಮೇಲೆ ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ದೊರೆತಿದ್ದು. ಬಸ್​ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಮೇಲೆ ಪೊಲೀಸರು ಪೋಕ್ಸೋ ಕೇಸ್​ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಮಾರಿಹಾಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಕೆಟ್ ಕೊಡುವಾಗ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬಸ್ ಕಂಡಕ್ಟರ್ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ ಬಾಳೇಕುಂದ್ರಿ ಗ್ರಾಮದ ಬಳಿ ನಡೆದಿತ್ತು. ಈ ಕುರಿತು ಸ್ಥಳಕ್ಕೆ ಕನ್ನಡಪರ ಸಂಘಟನೆಗಳು ಅಕ್ರೋಶ ವ್ಯಕ್ತಪಡಿಸಿದ್ದರು ಹಘೂ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಇದನ್ನೂ ಓದಿ :ತಂಗಿ ಜೊತೆಗೆ ಸರಸವಾಡುತ್ತಿದ್ದ ಪ್ರಿಯಕರನನ್ನು ಕೊ*ಲೆ ಮಾಡಿ ಕುಂಭಮೇಳಕ್ಕೆ ಹೋದ ಅಣ್ಣ

ಇದೀಗ ಪೊಲೀಸರು ಹಲ್ಲೆಗೊಳಗಾದ ನಿರ್ವಾಹಕ ಮಹದೇವಪ್ಪ ಹುಕ್ಕೇರಿ ಮೇಲೆ ಪೋಕ್ಸೊ ಕೇಸ್​ ದಾಖಲಿಸಿದ್ದು. ಬಸ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಕೇಸ್ ದಾಖಲಾಗಿದೆ. ಇದೀಗ ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದ್ದು. ತುಂಬಿದ ಬಸ್​ನಲ್ಲಿ ನಿರ್ವಾಹಕ ಬಾಲಕಿಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಎದ್ದಿದ್ದು. ಪ್ರಕರಣದ ದಿಕ್ಕು ತಪ್ಪಿಸಲು ಪೊಲೀಸರು ಈ ಕ್ರಮಕ್ಕೆ ಕೈಹಾಕಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

 

RELATED ARTICLES

Related Articles

TRENDING ARTICLES