ಬೆಂಗಳೂರು : ಪತ್ನಿಯ ಜೊತೆ ಪಲ್ಲಂಗದಾಟವಾಡುತ್ತಿದ್ದ ಸ್ನೇಹಿತನನ್ನು ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಮೃತ ವ್ಯಕ್ತಿಯನ್ನು ಕಿಶೋರ್ ಎಂದು ಗುರುತಿಸಲಾಗಿದೆ.
ಹೌದು.. ಮೂಲತಃ ಕೆಜಿಎಫ್ ಮೂಲದ ಸತೀಶ್ ರೆಡ್ಡಿ, ಮೀನಾ ಎಂಬಾಕೆಯ ಜೊತೆ ಕಳೆದ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದನು. ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಇಬ್ಬರು ಸುಖಿ ಜೀವನ ನಡೆಸುತ್ತಿದ್ದರು. ಆದರೆ ಸತೀಶ್ಗೆ ಚಿತ್ರದುರ್ಗದ ಕಿಶೋರ್ ಎಂಬಾತನ ಸ್ನೇಹವಾಗಿತ್ತು. ಆತನೂ ಕೂಡ ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಹೀಗಿರಬೇಕಾದರೆ ಮೀನಾ ಮತ್ತು ಕಿಶೋರ್ ನಡುವೆ ಲವ್ವಿ-ಡವ್ವಿ ಶುರುವಾಗಿತ್ತು. ಇಬ್ಬರ ಆಟ ಕಂಡ ಗಂಡ ಹೆಂಡತಿಗೆ ಬುದ್ದಿ ಹೇಳಿದ್ದನು. ಆದರೆ ಇದಕ್ಕೆಲ್ಲಾ ಕೇರ್ ಮಾಡದ ಹೆಂಡತಿ ಗಂಡನನ್ನು ಬಿಟ್ಟು ತಾಯಿ ಮತ್ತು ಮಗುವಿನೊಂದಿಗೆ ಬೇರೆ ಮನೆ ಮಾಡಿ ವಾಸ ಮಾಡುತ್ತಿದ್ದಳು.
ಇದನ್ನೂ ಓದಿ :ತಂಗಿ ಜೊತೆಗೆ ಸರಸವಾಡುತ್ತಿದ್ದ ಪ್ರಿಯಕರನನ್ನು ಕೊ*ಲೆ ಮಾಡಿ ಕುಂಭಮೇಳಕ್ಕೆ ಹೋದ ಅಣ್ಣ
ಬೆಂಗಳೂರಿನ ಕೊಡತಿ ಎಂಬಲ್ಲಿ ಮನೆ ಮಾಡಿದ್ದ ಮೀನಾಳನ್ನು ನೋಡಲು ಕಿಶೋರ್ ಕೂಡ ಆಗ್ಗಾಗ್ಗೆ ಬಂದು ಹೋಗುತ್ತಿದ್ದನು. ಮನೆ ಮಾಲೀಕರ ಬಳಿ ಮೀನಾ ಈತನನ್ನು ಸಹೋದರ ಎಂದು ಹೇಳಿಕೊಂಡಿದ್ದಳು. ಆದರೆ ನಿನ್ನೆ ಸಂಜೆ ಮೀನಾಳ ಗಂಡ ಸತೀಶ್ ಕೀಶೋರ್ನ ಹತ್ಯೆ ಮಾಡಲು ಮೊದಲೇ ಪ್ಲಾನ್ ಮಾಡಿಕೊಂಡು ಚಾಕುವಿನೊಂದಿಗೆ ಹೆಂಡತಿ ಮನೆ ಬಳಿ ಬಂದು ಕಾದು ಕುಳಿತ್ತಿದ್ದನು. ಈ ವೇಳೆ ಕಿಶೋರ್ ಕಾಣುತ್ತಿದ್ದಂತೆ ಆತನ ಹೊಟ್ಟೆಗೆ ಇರಿದಿದ್ದಾನೆ.
ಸುಮಾರು 5 ನಿಮಿಷಗಳ ಕಾಲ ಇವರಿಬ್ಬರ ನಡುವೆ ಕಲಹ ನಡೆದಿದ್ದು, ಸತೀಶ್ ಮನಸೋ ಇಚ್ಚೆ ಕಿಶೋರ್ಗೆ ಚಾಕುವಿನಿಂದ ಇರಿದಿದ್ದಾನೆ. ಆದರೆ ಅಲ್ಲಿದ್ದ ಸ್ಥಳೀಯರು ಇವರಿಬ್ಬರ ನಡುವಿನ ಜಗಳ ಬಿಡಿಸದೆ ವಿಡಿಯೋ ಮಾಡಿದ್ದಾರೆ. ಇದೇ ವೇಳೆ ಅಲ್ಲಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯಕರನನ್ನು ಮೀನಾ ಆಸ್ಪತ್ರೆಗೆ ದಾಖಲಿಸಿದರು ಕೂಡ ಕಿಶೋರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.