ಬಳ್ಳಾರಿ : ವ್ಯಾಪಾರಕ್ಕೆ ಎಂದು ನಗರಕ್ಕೆ ಬಂದು ನೆಲೆಸಿದ್ದ ದಂಪತಿಗಳು ಕೌಟುಂಬಿಕ ದುರಂತ ಅಂತ್ಯ ಕಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದ್ದು. ಕೋಪಗೊಂಡ ಪತಿ ಪತ್ನಿಯ ಕೊಲೆ ಮಾಡಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ತಾಯಿಯರ ಈ Suನಿರ್ಧಾರದಿಂದ ಮೂವರು ಮಕ್ಕಳು ಅನಾಥರಾಗಿದ್ದಾರೆ.
ಗಣಿಜಿಲ್ಲೆ ಬಳ್ಳಾರಿಯ ಗ್ಲಾಸ್ ಬಜಾರ್ ಓಣಿಯಲ್ಲಿ ಯಾವಾಗಲು ಜನಜಂಗುಳಿ. ಇಂತಹ ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ರಾಜಸ್ಥಾನ ಮೂಲದ ಬಟ್ಟೆ ವ್ಯಾಪಾರಿ ನೀರಿನ ಪ್ಲಾಸ್ಕ್ನಿಂದ ಹೊಡೆದು ಪತ್ನಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕರ್ ರಾಮ್ (40), ಶಾಂತಿ ದೇವಿ (34) ಮೃತ ದಂಪತಿಗಳು. ಇಬ್ಬರ ನಡುವೆ ಆಗಾಗ್ಗೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು.ಆದರೆ ಇವರಿಬ್ಬರ ನಡುವಿನ ಜಗಳ ನಿನ್ನೆ ವಿಕೋಪಕ್ಕೆ ತಿರುಗಿ ಪತಿ ಶಂಕರ್ ಪತ್ನಿಗೆ ಹೊಡೆದು ಕೊಲೆ ಮಾಡಿ ನಂತರ ತಾನೂ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಚರಂಡಿ ಸ್ವಚ್ಚಗೊಳಿಸುತ್ತಿದ್ದ ಕಾರ್ಮಿಕರು ಮತ್ತು ಸ್ಥಳೀಯರ ನಡುವೆ ‘ಕಿತ್ತಾಟ, ಹೊಡೆದಾಟ’
ಇನ್ನು ಎಂದಿನಂತೆ ಶಾಲೆಗೆ ಹೋದ ಮಕ್ಕಳಿಗೆ ಮಧ್ಯಾಹ್ನ ಶಾಂತಾ ದೇವಿ ಊಟವನ್ನು ತೆಗೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಮನೆಗೆ ಬಂದು ನೋಡಿದಾಗ ಕಿಟಕಿಯಲ್ಲಿ ತಂದೆ ಶಂಕರ್ ನೇಣಿಗೆ ಶರಣಾಗಿರೋದು ಕಂಡು ಬಂದಿದೆ. ಗಾಬಾರಿಯಾದ ಮಕ್ಕಳು ಮನೆಯ ಎದುರಿಗೆ ಇರೋ ಶಂಕರ್ ಅವರ ಅಂಗಡಿಯಲ್ಲಿದ್ದ, ಅವರ ಅಣ್ಣನಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಬಾಗಿಲು ಒಡೆದು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬ್ರೂಸ್ ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಕೈಗೊಂಡಿದ್ದಾರೆ.
ಸಾವಿರಾರು ಕಿಲೋಮೀಟರ್ ದೂರದಿಂದ ಬಂದು ಬದುಕು ಕಟ್ಟಿಕೊಂಡು ಸುಖವಾಗಿ ಜೀವನ ನಡೆಸುತ್ತಿದ್ದ ಶಂಕರ್ ಕುಟುಂಬ. ಕೌಟಂಬಿಕ ಕಲಹದಿಂದ ಕೋಪದ ಕೈಗೆ ಬುದ್ದಿಕೊಟ್ಟು ಮೂರು ಮಕ್ಕಳನ್ನು ಅನಾಥವಾಗಿಸಿದೆ. ತಂದೆ ತಾಯಿಯ ಸ್ಥಿತಿಯನ್ನು ನೋಡಿದ ಮಕ್ಕಳ ದುಖವನ್ನು ನೋಡುವವರ ಕಣ್ಣಲ್ಲಿ ನೀರು ತರಿಸುವಂತೆ ಇದೆ.