ಕಲಬುರಗಿ : ತಂಗಿ ಜೊತೆ ಸರಸಕ್ಕೆ ಎಂದು ಮನೆಗೆ ಬಂದಿದ್ದ ಪ್ರಿಯಕರನನ್ನು ಕೊಲೆ ಮಾಡಿದ ಅಣ್ಣ ಕುಂಭಮೇಳಕ್ಕೆ ಹೋಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ.
ಹೌದು.. ಕಲಬುರಗಿಯ ಜಿಲ್ಲೆ ಆಳಂದ ತಾಲೂಕಿನ ಖಜೂರಿ ಗ್ರಾಮದ ನಿವಾಸಿ ರಾಹುಲ್ ಮತ್ತು ಆಳಂದ ತಾಲೂಕಿನ ಆನೂರು ಗ್ರಾಮದ ಯುವತಿ ಭಾಗ್ಯವಂತಿ ಜೊತೆ ಪ್ರೇಮ ಸಂಬಂಧ ಹೊಂದಿದ್ದನು. ಜೀಪ್ ಚಾಲಕನಾಗಿದ್ದ ರಾಹುಲ್ ತನ್ನ ಜೀಪ್ ನಲ್ಲಿಯೇ ನಿತ್ಯ ಭಾಗ್ಯವಂತಿಗೆ ಕಾಲೇಜಿಗೆ ಕರೆದೊಯ್ಯುತ್ತಿದ್ದ. ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ ರಾಹುಲ್ಗೆ ಮದುವೆಯಾಗಿ ಇತ್ತೀಚೆಗೆ ಮಗುವು ಕೂಡ ಜನಿಸಿತ್ತು ಆದರೆ ಇಬ್ಬರ ನಡುವೆ ಪ್ರೀತಿ ಮುಂದುವರಿದಿತ್ತು.
ಇದನ್ನೂ ಓದಿ : ಕನ್ನಡದಲ್ಲಿ ಮಾತಾಡಿ ಎಂದಿದ್ದಕ್ಕೆ ಕಂಡೆಕ್ಟರ್ಗೆ ಥಳಿಸಿದ ಮರಾಠಿ ಪುಂಡರು
ಆದರೆ ಫೆ.16ರಂದು ಭಾಗ್ಯವಂತಿಯ ಅಣ್ಣ ಮತ್ತು ಆಕೆಯ ತಾಯಿಗೆ ಊರಿಗೆ ಹೋದ ಕಾರಣ ಯುವತಿ ರಾಹುಲ್ನನ್ನು ಮನೆಗೆ ಕರೆದಿದ್ದಳು. ಪ್ರಿಯತಮೆಯ ಕರೆಗೆ ಹೋಗೊಟ್ಟ ರಾಹುಲ್ ಆಕೆಯ ಮನೆಗೆ ಹೋಗಿದ್ದನು. ಆದರೆ ಈ ವೇಳೆ ಯುವತಿಯ ಅಣ್ಣ ಪೃಥ್ವಿರಾಜ್ ಅಚಾನಕ್ಕಾಗಿ ಮನೆಗೆ ಬಂದಿದ್ದನು. ಈ ವೇಳೆ ತಂಗಿಯ ಜೊತೆಗಿದ್ದ ಈತನನ್ನು ನೋಡಿ ಹಲ್ಲೆ ನಡೆಸಿದ್ದನು. ಹಲ್ಲೆಯಿಂದ ರಾಹುಲ್ ಸ್ಥಳದಲ್ಲೆ ಸಾವನ್ನಪ್ಪಿದ್ದನು.
ಈ ವೇಳೆ ಪೃಥ್ವಿರಾಜ್ ಈ ವಿಶಯವನ್ನು ತನ್ನ ಸ್ನೇಹಿತ ಪವನ್ಗೆ ತಿಳಿಸಿ ಶವ ಸಾಗಿಸಲು ಸಹಾಯ ಕೇಳಿದ್ದನು. ಪೃಥ್ವಿರಾಜ್ ಮತ್ತು ಪವನ್ ಇಬ್ಬರು ಶವವನ್ನು ಬೈಕ್ ಮೇಲೆ ಇಟ್ಟುಕೊಂಡು ಸಾಂಗ್ವಾ ಡ್ಯಾಂ ಬಳಿ ಬಂದು ಶವಕ್ಕೆ ಬಂಡೆ ಕಲ್ಲು ಕಟ್ಟಿ ಬಿಸಾಕಿದ್ದರು. ನಂತರ ಯುವತಿಯ ಅಣ್ಣ ಏನು ತಿಳಿದಿಲ್ಲ ಎಂಬುವಂತೆ ಕುಂಭಮೇಳಕ್ಕೆ ಹೋಗಿದ್ದನು.
ಸದ್ಯ ಪೊಲೀಸರು ಶವವನ್ನು ಡ್ಯಾಂನಿಂದ ಮೇಲೆತ್ತಿದ್ದು. ಕೊಲೆ ಆರೋಪಿ ಪೃಥ್ವಿರಾಜ್ ಮತ್ತು ಆತನ ಸಹೋದರಿ ಭಾಗ್ಯವಂತಿ ಹಾಗೂ ತಾಯಿ ಸೀತಾಬಾಯಿ ಮೂವರು ಪರಾರಿಯಾಗಿದ್ದಾರೆ. ಶವ ಸಾಗಿಸಲು ಸಹಾಯ ಮಾಡಿರುವ ಆರೋಪದ ಅಡಿ ಪವನ್ ಮತ್ತು ಇನ್ನೊಬ್ಬ ಅಪ್ರಾಪ್ತ ಯುವಕನನ್ನು ಬಂಧಿಸಲಾಗಿದ್ದು. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.