ಹಾಸನ : ಚರಂಡಿಯಲ್ಲಿದ್ದ ತ್ಯಾಜ್ಯವನ್ನು ಹೊರ ತೆಗೆಯುತ್ತಿದ್ದ ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಹಲ್ಲೆಯಿಂದ ಗಾಯಗೊಂಡಿರುವ ಐವರು ಪೌರ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಹಾಸನ ಜಿಲ್ಲೆ, ಅರಸೀಕೆರೆ ಪಟ್ಟಣದ, ಮುಜಾರ್ ಮೊಹಲ್ಲಾದಲ್ಲಿ ಘಟನೆ ನಡೆದಿದ್ದು. ಮೊಹಲ್ಲಾದ 23ನೇ ವಾರ್ಡ್ನಲ್ಲಿ ಚರಂಡಿ ಸ್ವಚ್ಚತೆಯಲ್ಲಿ ತೊಡಗಿದ್ದರು. ಚರಂಡಿಯಲ್ಲಿದ್ದ ತ್ಯಾಜ್ಯವನ್ನು ಹೊರತೆಗೆದ ಪೌರ ಕಾರ್ಮಿಕರು ಅದನ್ನು ರಸ್ತೆ ಬದಿಯಲ್ಲಿ ಹಾಕಿದ್ದರು. ಇದನ್ನು ಗಮನಿಸಿದ ಬಡಾವಣೆ ನಿವಾಸಿ ಮನ್ಸೂರ್ ಮತ್ತು ಆತನ ತಾಯಿ ಪೌರ ಕಾರ್ಮಿಕರ ಮೇಲೆ ನಮ್ಮ ಮನೆ ಮುಂದೆ ಕಸ ಯಾಕೆ ಹಾಕಿದ್ದೀರ ಎಂದು ಜಗಳ ತೆಗೆದಿದ್ದಾರೆ.
ಇದನ್ನೂ ಓದಿ :ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಸ್ನೇಹಿತನಿಗೆ ಗುಂಡಿ ತೋಡಿದ ಗಂಡ
ಈ ವೇಳೆ ಪೌರ ಕಾರ್ಮಿಕರು ಮನೆಯ ಹಿಂಭಾಗದಲ್ಲಿ ಕಸ ಹಾಕಿದ್ದೇವೆ ಎಂದು ಸಮಜಾಯಿಸಿ ನೀಡಿದ್ದಾರೆ. ಆದರೆ ಇದಕ್ಕೆ ಬಗ್ಗದ ಮನ್ಸೂರ್ ಚರಂಡಿಯಿಂದ ತೆಗೆದಿದ್ದ ಕಸವನ್ನು ರಸ್ತೆಗೆ ತಳ್ಳಲು ಮುಂದಾಗಿದ್ದಾನೆ. ಈ ವೇಳೆ ಇದಕ್ಕೆ ಅಡ್ಡಿಪಡಿಸಿದ ಪೌರ ಕಾರ್ಮಿಕರುನ ಮನ್ಸೂರನನ್ನು ತಳ್ಳಾಡಿದ್ದಾರೆ. ಈ ವೇಳೆ ಇಬ್ಬರು ಪರಸ್ಪರ ಕೈ ಮಿಲಾಯಿಸಿಕೊಂಡಿದ್ದಾರೆ. ಹಲ್ಲೆಯಲ್ಲಿ ಲತಾ, ಕಲಾವತಿ, ಪಾರ್ವತಮ್ಮ, ಅನುರಾಧ ಮತ್ತು ವೆಂಕಟಲಕ್ಷ್ಮಿ ಎಂಬ ಕಾರ್ಮಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದ್ದು.